ಮೂಡುಬಿದಿರೆ:ಸಿಡಿ ಪ್ರಕರಣದಲ್ಲಿ ರಾಜ್ಯದ 225 ಶಾಸಕರು ನೈತಿಕ ಪರೀಕ್ಷೆಗೊಳಪಡಲಿ ಎಂಬ ಸಚಿವ ಡಾ. ಸುಧಾಕರ್ ಹೇಳಿಕೆ ಖಂಡನೀಯ. ರಾಜ್ಯದಲ್ಲಿ ಈಗಲೂ ಕೆಲವು ಆದರ್ಶ ಶಾಸಕರಿದ್ದಾರೆ. ಎಲ್ಲರ ಬಗ್ಗೆ ಆರೋಪ ಹೊರಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಸಚಿವ ಸುಧಾಕರ್ ಹೇಳಿಕೆಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಖಂಡನೆ - ಸಚಿವ ಸುಧಾಕರ್ ಹೇಳಿಕೆ,
ಸಚಿವ ಸುಧಾಕರ್ ಹೇಳಿಕೆಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಖಂಡನೆ ವ್ಯಕ್ತಪಡಿಸಿದ್ದಾರೆ.
![ಸಚಿವ ಸುಧಾಕರ್ ಹೇಳಿಕೆಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಖಂಡನೆ Former minister AbhayChandra reaction, AbhayChandra reaction on Minister Sudhakar statement, Minister Sudhakar statement, Minister Sudhakar statement news, ಮಾಜಿ ಸಚಿವ ಅಭಯಚಂದ್ರ ಜೈನ್ ಖಂಡನೆ, ಸಚಿವ ಸುಧಾಕರ್ ಹೇಳಿಕೆಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಖಂಡನೆ, ಸಚಿವ ಸುಧಾಕರ್ ಹೇಳಿಕೆ, ಸಚಿವ ಸುಧಾಕರ್ ಹೇಳಿಕೆ ಸುದ್ದಿ,](https://etvbharatimages.akamaized.net/etvbharat/prod-images/768-512-11175345-1038-11175345-1616823520163.jpg)
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಕರ್ನಾಟಕವನ್ನು ನಿರ್ಲಕ್ಷಿಸಿದ್ದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಆರ್ಥಿಕ ಕುಸಿತದಿಂದ ಜನರ ಬದುಕು ದುಸ್ತರವಾಗಿದೆ. ಈ ಬಾರಿಯ ಉಪಚುನಾವಣೆಯಲ್ಲಿ ಮೋದಿ ಹೆಸರು ಹೇಳಿಕೊಂಡು ಚುನಾವಣೆ ಗೆಲ್ಲುತ್ತೇವೆ ಎಂಬ ಭರವಸೆ ಬಿಜೆಪಿಗೆ ಇಲ್ಲ ಎಂದು ಹೇಳಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆಗೆ 28 ವರ್ಷದ ಸುದೀರ್ಘ ರಾಜಕೀಯ ಅನುಭವ ಇರುವ ಹಾಗೂ ಎರಡು ಬಾರಿ ಸಚಿವರಾಗಿದ್ದ ಕಾಂಗ್ರೆಸ್‍ನ ಸತೀಶ್ ಜಾರಕಿಹೊಳಿ ವಿರುದ್ಧ ಕಣಕ್ಕಿಳಿದಿರುವ ಮಾಜಿ ಕೇಂದ್ರ ಸಚಿವ ಬಿಜೆಪಿಯ ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಗೃಹಿಣಿಯಾಗಿದ್ದು, ಅವರಿಗೆ ರಾಜಕೀಯ ಅನುಭವ ಇಲ್ಲ. ಅನುಕಂಪದ ಅಲೆಯಲ್ಲಿ ಚುನಾವಣೆ ಗೆಲ್ಲುತ್ತಾರೆ ಎಂಬ ಬಿಜೆಪಿಯ ಲೆಕ್ಕಾಚಾರವನ್ನು ಬೆಳಗಾವಿಯ ಮತದಾರರು ಸುಳ್ಳಾಗಿಸಲಿದ್ದಾರೆ ಎಂದು ಅಭಯಚಂದ್ರ ಜೈನ್ ಹೇಳಿದರು.