ಕರ್ನಾಟಕ

karnataka

ETV Bharat / state

ಕೊರಗರ ಮೇಲಿನ ಎಫ್ಐಆರ್‌ನ ರಾಜ್ಯ ಸರಕಾರ ತಕ್ಷಣ ಹಿಂಪಡೆಯಲಿ : ಡಾ.ಜಿ.ಪರಮೇಶ್ವರ್ - ಮಂಗಳೂರಿನಲ್ಲಿ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಆಗ್ರಹ

ಗಣರಾಜ್ಯೋತ್ಸವ ಪರೇಡ್​​ಗೆ ಕೇರಳ ಸರಕಾರವು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕಳುಹಿಸಿಕೊಟ್ಟಿದೆ. ಆದರೆ, ಈ‌ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಆದ್ದರಿಂದ ದೇಶದ ಜನತೆಯಲ್ಲಿ ಈ ಸ್ತಬ್ಧಚಿತ್ರವನ್ನು ಯಾಕೆ ತಿರಸ್ಕರಿಸಲಾಗಿದೆ ಎಂಬ ಪ್ರಶ್ನೆ ಹುಟ್ಟಿದೆ..

ಮಂಗಳೂರಿನಲ್ಲಿ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಆಗ್ರಹ
ಮಂಗಳೂರಿನಲ್ಲಿ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಆಗ್ರಹ

By

Published : Jan 18, 2022, 7:15 PM IST

ಮಂಗಳೂರು :ಇತ್ತೀಚೆಗೆ ಉಡುಪಿಯಲ್ಲಿ ಕೊರಗ ಸಮುದಾಯದವರ ಮದುವೆ ಮನೆಯಲ್ಲಿ ನಡೆದಿರುವ ಪೊಲೀಸ್ ದೌರ್ಜನ್ಯ ಅಕ್ಷಮ್ಯ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೋ ನಾಲ್ಕಾರು ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಿದರೆ ಸರಿ ಹೋಗಲ್ಲ.

ಪೊಲೀಸರ ಅಮಾನತು ಮೂಲಕ‌ ತಪ್ಪೆಸಗಿರುವುದನ್ನು ಒಪ್ಪಿರುವ ರಾಜ್ಯ ಸರ್ಕಾರ, ತಕ್ಷಣ ಕೊರಗರ ಮೇಲಿನ ಎಫ್ಐಆರ್ ಹಿಂಪಡೆಯಬೇಕೆಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.

ಮಂಗಳೂರಿನಲ್ಲಿ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಮಾತನಾಡಿರುವುದು..

ಅದೇ ಸಮಯದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ, ಅವರನ್ನು ಯಾರೂ ಪ್ರಶ್ನಿಸಿಲ್ಲ. ಪೊಲೀಸರು ಏಕಾಏಕಿ ಮದುವೆ ಮನೆಗೆ ನುಗ್ಗಿ ಲಾಠಿ ಏಟು ನೀಡಿ, ಎಫ್ಐಆರ್ ದಾಖಲಿಸಿದ್ದಾರೆ. ಆ ಬಡ ಜನತೆ ಏನು ಮಹಾ ಅಪರಾಧ ಮಾಡಿದ್ದಾರೆ.

ಈ ರೀತಿಯ ದೌರ್ಜನ್ಯ ಎಸಗಲು ಯಾರು ಪೊಲೀಸರಿಗೆ ಆದೇಶಿಸಿದ್ದಾರೋ ನನಗೆ ಗೊತ್ತಿಲ್ಲ. ತಕ್ಷಣ ನಾನು ರಾಜ್ಯದ ಸಿಎಂ ಹಾಗೂ ಗೃಹಮಂತ್ರಿಗಳಿಗೆ ಎಫ್ಐಆರ್ ವಾಪಸ್ ಪಡೆಯಬೇಕೆಂದು ಆಗ್ರಹಿಸುತ್ತೇನೆ ಎಂದರು.

ಗಣರಾಜ್ಯೋತ್ಸವ ಪರೇಡ್​​ಗೆ ಕೇರಳ ಸರಕಾರವು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕಳುಹಿಸಿಕೊಟ್ಟಿದೆ. ಆದರೆ, ಈ‌ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಆದ್ದರಿಂದ ದೇಶದ ಜನತೆಯಲ್ಲಿ ಈ ಸ್ತಬ್ಧಚಿತ್ರವನ್ನು ಯಾಕೆ ತಿರಸ್ಕರಿಸಲಾಗಿದೆ ಎಂಬ ಪ್ರಶ್ನೆ ಹುಟ್ಟಿದೆ.

ನಾರಾಯಣ ಗುರುಗಳು ಯಾವುದೇ ಪ್ರಚೋದನಕಾರಿ ವಿಚಾರಗಳನ್ನು ತಂದು ಜನರಿಗೆ ತಿಳಿಸಿಲ್ಲ. ಅವರು ಎಲ್ಲರಲ್ಲೂ ಸಮಾನತೆಯನ್ನು ಪ್ರತಿಪಾದಿಸಿದವರು. ಆದ್ದರಿಂದ ತಕ್ಷಣ ಅದನ್ನು ಬದಲಾವಣೆ ಮಾಡಿ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ಕೊಡಬೇಕೆಂದು ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.

ABOUT THE AUTHOR

...view details