ಕರ್ನಾಟಕ

karnataka

ETV Bharat / state

ಮಂಗಳೂರಿಗೆ ಮಾಜಿ ಸಿಎಂ ಹೆಚ್​ಡಿಕೆ ಭೇಟಿ: ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ರೂ. ವಿತರಣೆ - ಮಂಗಳೂರು ಹಿಂಸಾಚಾರ ಪ್ರಕರಣ​

ಮಂಗಳೂರಿನಲ್ಲಿ ಗೋಲಿಬಾರ್​ನಲ್ಲಿ ಬಲಿಯಾದ ಮೃತರ ಕುಟುಂಬಕ್ಕೆ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಅವರು ತಲಾ ₹ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟಿದ್ದ ಇಬ್ಬರ ಕುಟುಂಬಸ್ಥರಿಗೆ ಈ ಪರಿಹಾರಸ ಚೆಕ್​​ನ್ನು ಹೆಚ್​ಡಿಕೆ ವಿತರಿಸಿದ್ದಾರೆ.

Former CM kumarswamy visit to Mangalore
ಮಂಗಳೂರಿಗೆ ಮಾಜಿ ಸಿಎಂ ಹೆಚ್​ಡಿಕೆ ಭೇಟಿ

By

Published : Dec 22, 2019, 11:30 AM IST

Updated : Dec 22, 2019, 12:13 PM IST

ಮಂಗಳೂರು: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆ ಹಿಂಸಾರೂಪ ಪಡೆದು ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದರು. ಸಾವನ್ನಪ್ಪಿದ ಇಬ್ಬರ ಕುಟುಂಬಸ್ಥರಿಗೆ ಇಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿ, ತಲಾ ₹ 5 ಲಕ್ಷ ಪರಿಹಾರ ಚೆಕ್​ ನೀಡಿದ್ದಾರೆ.

ಮಂಗಳೂರಿಗೆ ಮಾಜಿ ಸಿಎಂ ಹೆಚ್​ಡಿಕೆ ಭೇಟಿ

ಕುದ್ರೋಳಿಯ ರಹಮತ್ ನಗರದಲ್ಲಿರುವ ಮೃತ ನೌಸೀನ್ ಮನೆಗೆ ಭೇಟಿ ನೀಡಿ, ಮೃತನ ತಾಯಿಗೆ ₹ 5 ಲಕ್ಷದ ಪರಿಹಾರ ಚೆಕ್ ವಿತರಿಸಿದರು.

ನಂತರ ಕಂದಕ್​ನ ಅಜೀಜುದ್ದೀನ್ ರಸ್ತೆಯಲ್ಲಿರುವ ಮೃತ ಜಲೀಲ್ ನಿವಾಸಕ್ಕೆ ಭೇಟಿ ನೀಡಿ, ಆ ಕುಟುಂಬಕ್ಕೂ ಚೆಕ್​ ಮೂಲಕ ಪರಿಹಾರ ಚೆಕ್​ಅನ್ನು ಕುಮಾಸ್ವಾಮಿ ನೀಡಿದರು.

ಆಸ್ಪತ್ರೆಗೆ ಭೇಟಿ: ಪ್ರತಿಭಟನೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದವರ ಸಮಸ್ಯೆಗಳನ್ನು ಸಹ ಕುಮಾರಸ್ವಾಮಿ ಆಲಿಸಿದರು. ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಹೇಳಿದ್ರು.

ಒಟ್ಟು ಎಂಟು ಗಾಯಾಳುಗಳು ಯುನಿಟಿ ಹಾಗೂ ಹೈಲ್ಯಾಂಡ್ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

Last Updated : Dec 22, 2019, 12:13 PM IST

ABOUT THE AUTHOR

...view details