ಮಂಗಳೂರು:ನನಗೆ ಜನರ ಬಗ್ಗೆ ಕಾಳಜಿ ಇದೆ. ಜನ ಅಧೀರರಾಗಬಾರದು, ಆತಂಕಕ್ಕೆ ಒಳಗಾಗಬಾರದು. ರಾಜ್ಯದ ಆರೂವರೆ ಕೋಟಿ ಜನರ ರಕ್ಷಣೆ ಮುಖ್ಯ. ಇಲ್ಲಿನ ಬಿಜೆಪಿ ಸರ್ಕಾರ ಅಧೀರ ಆಗಿದೆ. ಮಂಗಳೂರಿನಲ್ಲಿನ ಇಂದಿನ ಪರಿಸ್ಥಿತಿಗೆ ಬಿಜೆಪಿ ಸರ್ಕಾರ ಹಾಗೂ ಅವರ ನಾಯಕರೇ ಕಾರಣವೆಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರವಾದ ಆರೋಪ ಮಾಡಿದ್ದಾರೆ.
ಮಂಗಳೂರು ಪರಿಸ್ಥಿತಿಗೆ ಬಿಜೆಪಿ ಸರ್ಕಾರ, ನಾಯಕರು ಕಾರಣ: ಹೆಚ್ಡಿಕೆ ಗಂಭೀರ ಆರೋಪ - ಮಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ
ಮಂಗಳೂರಿನಲ್ಲಿನ ಇಂದಿನ ಪರಿಸ್ಥಿತಿಗೆ ಉದ್ಭವ ಮಾಡಿರೋದು ಬಿಜೆಪಿ ಸರ್ಕಾರ ಹಾಗೂ ಅವರ ನಾಯಕರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಜ್ಪೆ ವಿಮಾನ ನಿಲ್ದಾಣದಲ್ಲಿ ಗಂಭೀರವಾದ ಆರೋಪ ಮಾಡಿದ್ದಾರೆ.
ಮಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ
ಬಜ್ಪೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ವಿಷಮ ಪರಿಸ್ಥಿತಿಯನ್ನು ನಿರ್ಮಿಸಿಕೊಂಡಿರುವುದು ಬಿಜೆಪಿ ನಾಯಕರು ಎಂದು ದೂರಿದರು.
ನಿನ್ನೆ ಎಲ್ಲಾ ಮಾಧ್ಯಮಗಳಲ್ಲಿ ಬಂದಿಲ್ಲವೇ? ಅದಕ್ಕಿಂತ ಇನ್ನೇನು ಬೇಕು. ಅದು ಬಾಂಬಾ ಇಲ್ಲಾ ಪಟಾಕಿಯಾ? ಎಂದು ಪ್ರಶ್ನಿಸಿದರು. ಮಂಗಳೂರು ಆಯುಕ್ತ ಹರ್ಷ ಬಾಂಬ್ ಹೊಡೆದಿದ್ದಾರೆ ಎಂದು ತಮಾಷೆಗೆ ಹೇಳಿದ್ದೆ. ಇವತ್ತೇನಾದರೂ ಬಾಂಬ್ ಸಿಡಿದಿದೆಯಾ ಎಂದು ತಮಾಷೆ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದ್ರು.