ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಖಾಂತರ ದುಬಾಯಿಗೆ ತೆರಳಲು ಸಜ್ಜಾಗಿದ್ದ ಪ್ರಯಾಣಿಕನಿಂದ ರದ್ದಾದ ಭಾರತೀಯ ಕರೆನ್ಸಿ ನೋಟುಗಳ ಸಮೇತ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ರದ್ದಾದ ಭಾರತೀಯ ನೋಟು ಸಮೇತ ವಿದೇಶಿ ಕರೆನ್ಸಿ ವಶ.. - Mangalore airport
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದುಬೈಗೆ ತೆರಳಲು ಸಜ್ಜಾಗಿದ್ದ ಅಬ್ದುಲ್ ಖಾದರ್ ಖಂಡತ್ತಿಲ್ ಉಮರ್ ಎಂಬ ಪ್ರಯಾಣಿಕನಿಂದ ರದ್ದಾದ ಭಾರತೀಯ ಕರೆನ್ಸಿ ನೋಟುಗಳ ಸಮೇತ ವಿದೇಶಿ ಕರೆನ್ಸಿ ಕೂಡ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ರದ್ದಾದ ಭಾರತೀಯ ನೋಟು ಸಮೇತ ವಿದೇಶಿ ಕರೆನ್ಸಿ ವಶ
ಅಬ್ದುಲ್ ಖಾದರ್ ಖಂಡತ್ತಿಲ್ ಉಮರ್ ಎಂಬುವನು ನಿನ್ನೆ ರಾತ್ರಿ ದುಬೈಗೆ ಪ್ರಯಾಣಿಸಲು ಯತ್ನಿಸುತ್ತಿದ್ದ ವೇಳೆ ಆತನನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ, ಈತ ವಿದೇಶಿ ಕರೆನ್ಸಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.ಈತನ ಬಳಿ 5,01,500 ರೂ. ವಿದೇಶಿ ಕರೆನ್ಸಿ ಮತ್ತು 73,500 ರೂ. ಭಾರತದ ರದ್ದಾದ ನೋಟುಗಳು ಪತ್ತೆಯಾಗಿವೆ. ಈತನನ್ನು ವಶಕ್ಕೆ ಪಡೆದು ಹಣವನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.