ಕರ್ನಾಟಕ

karnataka

ETV Bharat / state

ಮಂಗಳೂರು ಏರ್ಪೋರ್ಟ್‌ನಲ್ಲಿ ₹25 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ 25.17 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿದೇಶಿ ಕರೆನ್ಸಿ
ವಿದೇಶಿ ಕರೆನ್ಸಿ

By

Published : Feb 10, 2022, 9:29 AM IST

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿದೇಶಕ್ಕೆ ಸಾಗಿಸುತ್ತಿದ್ದ 25.17 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಫೆ.8 ರಂದು ಮಂಗಳೂರಿನಿಂದ ದುಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಲು ಸಿದ್ಧನಾಗಿದ್ದ ಪ್ರಯಾಣಿಕನಿಂದ 90 ಸಾವಿರ ಯುಎಇ ರಾಷ್ಟ್ರದ ಕರೆನ್ಸಿ ದಿರಮ್ ನೋಟನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಭಾರತೀಯ ಮೌಲ್ಯ 17,77,500 ರೂ. ಆಗಿದೆ.

ವಿದೇಶಿ ಕರೆನ್ಸಿ

ಮತ್ತೊಂದು ಪ್ರಕರಣದಲ್ಲಿ ಫೆ. 6 ರಂದು ಕೇರಳದ ಕಾಸರಗೋಡು ಜಿಲ್ಲೆಯ ಪ್ರಯಾಣಿಕನೋರ್ವ ಮಂಗಳೂರಿನಿಂದ ಶಾರ್ಜಾಕ್ಕೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಲು ಸಿದ್ಧನಾಗಿದ್ದ. ಈ ವೇಳೆ ಆತನಿಂದ 10 ಸಾವಿರ ಅಮೆರಿಕನ್ ಡಾಲರ್ ವಶಪಡಿಸಿಕೊಳ್ಳಲಾಗಿದೆ. ಇದರ ಭಾರತೀಯ ಮೌಲ್ಯ 7,40,500 ರೂ. ಆಗಿದೆ.

ವಿದೇಶಿ ಕರೆನ್ಸಿ

ಇದನ್ನೂ ಓದಿ:ಬೆಂಗಳೂರು ಸಂಚಾರ ದಟ್ಟಣೆ ಶೇ 32ರಷ್ಟು ಇಳಿಮುಖ: ಎಲೆಕ್ಟ್ರಿಕ್ ವಾಹನ ಖರೀದಿ ಹೆಚ್ಚಳ

ಈ ಮೂಲಕ ಒಟ್ಟು 25,18,000 ರೂ. ಮತ್ತು ಪ್ರಯಾಣಿಕರಿಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details