ಮಂಗಳೂರು: ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟ ಮಂಗಳಮುಖಿಯರು ಯಕ್ಷಗಾನವನ್ನು ಆಯೋಜಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಐದು ಮಂದಿ ಮಂಗಳಮುಖಿಯರು ಸೇರಿ ಈ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದಾರೆ.
ಮಂಗಳೂರು ನಗರದ ಕೋಡಿಕಲ್ ಕಟ್ಟೆಯ ಮೈದಾನದಲ್ಲಿ ಫೆ.25ರಂದು ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸ್ಟಾರ್ ಭಾಗವತ ಪಟ್ಲ ಸತೀಶ್ ಶೆಟ್ಟರ ಮುಂದಾಳತ್ವದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಮಂಡಳಿಯವರು ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಸಲಿದ್ದಾರೆ. ಸುಮಾರು 1,500ರಷ್ಟು ಜನ ಸೇರುವ ನಿರೀಕ್ಷೆಯಿದ್ದು, ಅಷ್ಟೂ ಮಂದಿ ಯಕ್ಷಗಾನ ಆಸಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದೆ.