ಮಂಗಳೂರು: ಕೊರೊನಾ ಸೋಂಕು ಹರಡದಂತೆ ಲಾಕ್ ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಬದ್ರೀಯ್ಯಿನ್ ಜುಮ್ಮಾ ಮಸೀದಿ ಮಾರಿಪಳ್ಳ ಹಾಗೂ ಎಸ್ ಕೆಎಸ್ಎಸ್ಎಫ್ ಯುನಿಟ್ ವತಿಯಿಂದ ದಿನ ಬಳಕೆ ವಸ್ತುಗಳ ಕಿಟ್ಗಳನ್ನು ವಿತರಿಸಲಾಯಿತು.
ಈ ಕಿಟ್ನಲ್ಲಿ ಅಕ್ಕಿ, ಬೇಳೆ, ಚಾ ಹುಡಿ, ಸಕ್ಕರೆ, ಈರುಳ್ಳಿ, ಟೊಮ್ಯಾಟೊ ಮುಂತಾದ ದಿನ ಬಳಕೆ ಸಾಮಾಗ್ರಿಗಳನ್ನು ಸುಮಾರು 650 ಕುಟುಂಬಗಳಿಗೆ ವಿತರಣೆ ಮಾಡಲಾಯಿತು.