ದಕ್ಷಿಣ ಕನ್ನಡ(ಪುತ್ತೂರು):ಕೊರೊನಾ ನಿಯಂತ್ರಣ ಕ್ರಮದ ಹಿನ್ನೆಲೆಯಲ್ಲಿ ನಿರಂತರ ಶ್ರಮಿಸುತ್ತಿರುವ ಪುತ್ತೂರು ಸರ್ಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ಶಾಸಕರ ವಾರ್ ರೂಮ್ ವತಿಯಿಂದ ಅಗತ್ಯ ವಸ್ತುಗಳಿರುವ ಕಿಟ್ ವಿತರಿಸಲಾಯಿತು.
ಪುತ್ತೂರಿನ ಸರ್ಕಾರಿ ಆಸ್ಪತ್ರೆ ಡಿ ಗ್ರೂಪ್ ನೌಕರರಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ - putturu hospital
ಪುತ್ತೂರು ಸರ್ಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ಶಾಸಕರ ವಾರ್ ರೂಮ್ ವತಿಯಿಂದ ಅಗತ್ಯ ವಸ್ತುಗಳಿರುವ ಕಿಟ್ಗಳನ್ನು ವಿತರಿಸಲಾಯಿತು.
ಅಕ್ಕಿ, ತರಕಾರಿ ಸೇರಿದಂತೆ ದಿನ ಬಳಕೆಯ ಸಾಮಗ್ರಿಗಳಿರುವ ಕಿಟ್ಗಳನ್ನು ನೌಕರರಿಗೆ ವಿತರಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಯುದ್ಧ ಸಂದರ್ಭದಲ್ಲಿ ಸೈನಿಕರಂತೆ ಕೆಲಸ ಮಾಡುವ ಆರೋಗ್ಯ ವಿಭಾಗದ ಸಿಬ್ಬಂದಿ ಜವಾಬ್ದಾರಿಯುತವಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಧೈರ್ಯ ತುಂಬುವ ಜತೆಗೆ ಎಲ್ಲಾ ಸಹಕಾರ ನೀಡಲು ಆಡಳಿತ ವ್ಯವಸ್ಥೆ ಬದ್ಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ, ಸಹಾಯಕ ಆಡಳಿತಾಧಿಕಾರಿ ಯೋಗಾನಂದ, ಸರ್ಕಾರಿ ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯರಾದ ರಾಜೇಶ್ ಬನ್ನೂರು, ವಿದ್ಯಾ ಆರ್. ಗೌರಿ, ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ರಫೀಕ್ ದರ್ಬೆ, ಪ್ರಮುಖರಾದ ರಾಮದಾಸ್ ಹಾರಾಡಿ, ಉದಯಕುಮಾರ್, ನವೀನ್ ಮತ್ತಿತರಿದ್ದರು.