ಉಳ್ಳಾಲ: ಲಾಕ್ಡೌನ್ನಿಂದಾಗಿ ಕಂಗೆಟ್ಟಿರುವ 2249 ಬಡ ಕುಟುಂಬಗಳಿಗೆ ಸೋಮೇಶ್ವರ ಪುರಸಭೆ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಸೋಮೇಶ್ವರ ಪುರಸಭೆಯಿಂದ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ - food items kit Distribution by Somesvara Municipality
ಸೋಮೇಶ್ವರ ಪುರಸಭೆ ವ್ಯಾಪ್ತಿಯ 2249 ಬಡಕುಟುಂಬಗಳಿಗೆ ಪುರಸಭೆ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಸಂಘ ಸಂಸ್ಥೆಗಳು ಹಾಗೂ ದಾನಿಗಳಿಂದ ಸಂಗ್ರಹಿಸಿದ 15,825 ಕೆ.ಜಿ ಅಕ್ಕಿ, 6,89,335 ರೂ. ದಿನಸಿ ಸಾಮಗ್ರಿಗಳು, 20 ಸಿಲಿಂಡರ್ಗಳು , 100 ಮಾಸ್ಕ್, 440 ತೆಂಗಿನಕಾಯಿಯನ್ನು ಬಡ ಕುಟುಂಬಗಳಿಗೆ ವಿತರಿಸಲಾಯಿತು. ಅಲ್ಲದೇ ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 16 ಜನ ಆಶಾ ಕಾರ್ಯಕರ್ತೆಯರಿಗೆ ಹಾಗೂ ಐವರು ಪೌರ ಕಾರ್ಮಿಕರಿಗೆ ಅಕ್ಕಿ ಹಾಗೂ ದಿನಸಿ ಸಾಮಗ್ರಿಗಳನ್ನು ಸಹ ವಿತರಿಸಲಾಯಿತು.
ಜಿಲ್ಲಾಡಳಿತದ ಆದೇಶದಂತೆ ಕೆಎಂಎಫ್ ವತಿಯಿಂದ 70 ಲೀ. ಹಾಲನ್ನು 158 ವಲಸೆ ಕಾರ್ಮಿಕರಿಗೆ ಪುರಸಭಾ ವ್ಯಾಪ್ತಿಯಲ್ಲಿ ನೀಡಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.