ಮಂಗಳೂರು: ನಗರದ ತೊಕ್ಕೊಟ್ಟು ಸಮೀಪದ ಕುಂಪಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ಭವಾನಿ ಶಂಕರ ಶಾಂತಿ ಅವರ ನೇತೃತ್ವದಲ್ಲಿ ತೊಕ್ಕೊಟ್ಟು, ಕೆರೆಬೈಲ್, ಅಕ್ಕರೆಕೆರೆ ಸುತ್ತಮುತ್ತ ಇರುವ ಕೂಲಿ ಕಾರ್ಮಿಕರಿಗೆ, ಭಿಕ್ಷುಕರಿಗೆ ಆಹಾರ ವಿತರಣೆ ಮಾಡಲಾಯಿತು.
ಕುಂಪಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಿಂದ ನಿರಾಶ್ರಿತರಿಗೆ ಊಟದ ವ್ಯವಸ್ಥೆ.! - ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ಆಹಾರ ವಿತರಣೆ
ಕುಂಪಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ತೊಕ್ಕೊಟ್ಟು, ಕೆರೆಬೈಲ್, ಅಕ್ಕರೆಕೆರೆ ಸುತ್ತಮುತ್ತಲಿರುವ ಕೂಲಿಕಾರ್ಮಿಕರಿಗೆ, ಭಿಕ್ಷುಕರಿಗೆ ಆಹಾರ ವಿತರಣೆ ಮಾಡಲಾಯಿತು.
ನಿರಾಶ್ರಿತರಿಗೆ ಊಟದ ವ್ಯವಸ್ಥೆ...!
ಕೊರೊನೊ ಸೋಂಕಿನಿಂದ ಲಾಕ್ ಡೌನ್ ಮಾಡಿರುವ ಕಾರಣ ಕೂಲಿ ಕಾರ್ಮಿಕರು, ಭಿಕ್ಷುಕರು, ನಿರಾಶ್ರಿತರು ಊಟವಿಲ್ಲದೆ ಕಂಗಾಲಾಗಿದ್ದರು. ಈ ಹಿನ್ನೆಲೆಯಲ್ಲಿ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಇವರಿಗೆ ನೆರವಾಗುವ ದೃಷ್ಟಿಯಿಂದ ಕುಂಪಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ಆಹಾರ ವಿತರಣೆ ಮಾಡಲಾಯಿತು.
ಈ ಸಂದರ್ಭ ಗಂಗಾಧರ ಕುಜುಮಗದ್ದೆ, ಪ್ರವೀಣ್.ಎಸ್.ಕುಂಪಲ, ಗಣೇಶ್ ಶಿಲ್ಪಿ, ಪುರುಷೋತ್ತಮ ಕಲ್ಲಾಪು, ನಿತೇಶ್ ಪೂಜಾರಿ ಕುಂಪಲ, ಭರತ್ ಕುಂಪಲ ರಾಜೇಶ್.ಯು.ಬಿ, ಹೇಮಚಂದ್ರ ಕುಜುಮಗದ್ದೆ ಉಪಸ್ಥಿತರಿದ್ದರು.