ಕರ್ನಾಟಕ

karnataka

ETV Bharat / state

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರವಾಹ ಪೀಡಿತರಿಗೆ ಪರಿಹಾರ ಚೆಕ್ ವಿತರಣೆ

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ ಮಂಗಳೂರಿನಲ್ಲಿ ನಡೆಯಿತು. ಪ್ರಾಕೃತಿಕ ವಿಕೋಪಕ್ಕೆ ಈ ಬಾರಿ ದೊರಕಿದಷ್ಟು ದೊಡ್ಡ ಮೊತ್ತದ ಪರಿಹಾರ ಯಾವತ್ತೂ ದೊರಕಿಲ್ಲ. ಅದಕ್ಕಾಗಿ ಸಿಎಂ ಯಡಿಯೂರಪ್ಪ ಅವರಿಗೆ ಮಂಗಳೂರಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು‌

cheque

By

Published : Aug 26, 2019, 7:12 PM IST

ಮಂಗಳೂರು:ನಗರದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆಯು ಇಂದು ಬೆಳಗ್ಗೆ ಹಂಪನಕಟ್ಟೆಯ ಬಳಿಯಿರುವ ಮಿನಿ ವಿಧಾನಸೌಧದ ಬಳಿಯ ಎನ್​ಜಿಒ ಸಭಾಂಗಣದಲ್ಲಿ ನಡೆಯಿತು.

ಇಂದು 216 ಮಂದಿಗೆ 10 ಸಾವಿರ ರೂಪಾಯಿಯಂತೆ ಸರಿ ಸುಮಾರು 21,40,000 ರೂಪಾಯಿ, ಭಾಗಶಃ ಹಾನಿಯಾದ 5 ಮನೆಗಳಿಗೆ 95 ಸಾವಿರ ರೂಪಾಯಿಯಂತೆ 27,500 ಲಕ್ಷ ರೂಪಾಯಿಯ ಚೆಕ್ ವಿತರಣೆ ಮಾಡಲಾಯಿತು. ಮುಂದಿನ ಬಾರಿ ಸಂಪೂರ್ಣ ಹಾನಿಗೊಳಗಾದ ಮನೆಯವರಿಗೆ ತಲಾ 5 ಲಕ್ಷ ರೂಪಾಯಿಯಂತೆ ಪರಿಹಾರದ ಚೆಕ್ ನೀಡಲಾಗುತ್ತದೆ. ಇದರಲ್ಲಿ ಪದವು, ಜಪ್ಪಿನಮೊಗರು, ಬಜಾಲ್, ಬೆಂಗ್ರೆ, ಬೋಳೂರು ಹಾಗೂ ಇತರ ಗ್ರಾಮಗಳ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ.

ಪರಿಹಾರ ಚೆಕ್​ ವಿತರಣೆ

ಕಳೆದ ಹಲವಾರು ವರ್ಷಗಳಿಂದ ಪ್ರಾಕೃತಿಕ ವಿಕೋಪದ ಸಂದರ್ಭ ಮನೆಗೆ ನೀರು ನುಗ್ಗಿ ಸ್ವಲ್ಪ ಮಟ್ಟಿನ ತೊಂದರೆಗಳಾದರೆ 3,800 ರೂ‌. ಪರಿಹಾರ ಕೊಡಲಾಗುತ್ತಿತ್ತು. ಆದರೆ ಈ ವರ್ಷ ಅದು ಹತ್ತು ಸಾವಿರ ರೂ.ಗೆ ಏರಿದೆ. ಸಂಪೂರ್ಣ ಮನೆ ಹಾನಿಗೆ 95,100 ರೂ. ಕೊಡಲಾಗುತ್ತಿತ್ತು. ಆದರೆ ಈ ಬಾರಿ ಪೂರ್ಣ ಹಾನಿಯಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.

ಅಲ್ಲದೆ ಆ ಕುಟುಂಬ ಮನೆ ಕಟ್ಟುವವರೆಗೆ ಒಂದು ವರ್ಷಗಳ ಕಾಲ ಮನೆ ಬಾಡಿಗೆ ಕೊಡಲು ತಿಂಗಳಿಗೆ ತಲಾ 5 ಸಾವಿರ ರೂ. ನೀಡಲಾಗುತ್ತದೆ. ಸ್ವಾತಂತ್ರ್ಯದ ಬಳಿಕ ಪ್ರಾಕೃತಿಕ ವಿಕೋಪಕ್ಕೆ ಈ ಬಾರಿ ದೊರಕಿದಷ್ಟು ದೊಡ್ಡ ಮೊತ್ತದ ಪರಿಹಾರ ಯಾವತ್ತೂ ದೊರಕಿಲ್ಲ. ಅದಕ್ಕಾಗಿ ಸಿಎಂ ಯಡಿಯೂರಪ್ಪ ಅವರಿಗೆ ಮಂಗಳೂರಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು‌. ಈ ಸಂದರ್ಭ ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು.

ABOUT THE AUTHOR

...view details