ಕರ್ನಾಟಕ

karnataka

ETV Bharat / state

ಕಡಬ: ತಹಶೀಲ್ದಾರ್​ ನೇತೃತ್ವದಲ್ಲಿ ನೆರೆ ಪರಿಹಾರ ಮುಂಜಾಗ್ರತಾ ಸಭೆ - ನೆರೆಪರಿಹಾರ

ಗ್ರಾಮ ಪಂಚಾಯತ್​ ಮಟ್ಟದಲ್ಲಿ ನೆರೆ ಮುಂಜಾಗ್ರತಾ ಸಮಿತಿ ರಚಿಸಿ, ಮಳೆಗಾಲದ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸನ್ನದ್ಧರಾಗುವಂತೆ ತಾಲೂಕಿನ ಎಲ್ಲಾ ಅಧಿಕಾರಿಗಳಿಗೆ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಸೂಚನೆ ನೀಡಿದರು.

ಮುಂಜಾಗ್ರತಾ ಸಭೆ
ಮುಂಜಾಗ್ರತಾ ಸಭೆ

By

Published : May 29, 2020, 11:26 AM IST

ಕಡಬ:ಕಡಬದಲ್ಲಿ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ನೇತೃತ್ವದಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳ ಸಹಭಾಗಿತ್ವದಲ್ಲಿ ನೆರೆ ಮುಂಜಾಗ್ರತಾ ಸಭೆಯನ್ನು ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು.

ಎಲ್ಲಾ ಗ್ರಾಮ ಪಂಚಾಯತ್​ ಮಟ್ಟದಲ್ಲಿ ನೆರೆ ಮುಂಜಾಗ್ರತಾ ಸಮಿತಿ ರಚಿಸಿ ಮಳೆಗಾಲದ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸನ್ನದ್ಧರಾಗುವಂತೆ ತಾಲೂಕಿನ ಎಲ್ಲಾ ಅಧಿಕಾರಿಗಳಿಗೆ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಸೂಚನೆ ನೀಡಿದರು.

ನೆರೆ ಪರಿಹಾರ ಮುಂಜಾಗ್ರತಾ ಸಭೆ

ಯಾವುದೇ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೆಲಸ ನಿರ್ವಹಿಸಲು ಅಗತ್ಯವಿರುವ ಸ್ವಯಂ ಸೇವಕರನ್ನು, ಸಂಘ ಸಂಸ್ಥೆಗಳನ್ನು ಗುರುತಿಸಿ ಅವರ ಮಾಹಿತಿ ನೀಡಬೇಕು ಎಂದರು.

ನೆರೆ ಸಂಭವನೀಯ ಪ್ರದೇಶಗಳು ಮತ್ತು ಮುಳುಗಡೆಯಾಗಬಹುದಾದ ಪ್ರದೇಶಗಳ ಬಗ್ಗೆ ಸಭೆಯಲ್ಲಿ ವಿವರಿಸಲಾಯಿತು. ಕುಕ್ಕೆ ಸುಬ್ರಹ್ಮಣ್ಯ ಅಭಯ ವಸತಿ ಗೃಹ, ಶಿರಾಡಿ ಹಿ.ಪ್ರಾ. ಶಾಲೆಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯುವ ಬಗ್ಗೆಯೂ ಚರ್ಚೆ ನಡೆಯಿತು. ಅಲ್ಲದೆ ಮುಂದಿನ ದಿನಗಳಲ್ಲಿ ನೆರೆ ನಿರ್ವಹಣೆ ಕುರಿತ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ABOUT THE AUTHOR

...view details