ಕರ್ನಾಟಕ

karnataka

ETV Bharat / state

ಮಾರಕಾಸ್ತ್ರ ತೋರಿಸಿ ದರೋಡೆ ಪ್ರಕರಣ: ಮತ್ತೆ ಐವರು ಬಂಧನ - ದರೋಡೆ‌ ಆರೋಪಿಗಳ ಬಂಧನ

ಮಾರಕಾಸ್ತ್ರ ತೋರಿಸಿ ದರೋಡೆ‌ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

five-more-accused-arrested-in-robbery-case
ಮಾರಕಾಸ್ತ್ರ ತೋರಿಸಿ ದರೋಡೆ ಪ್ರಕರಣ

By

Published : Apr 1, 2021, 11:37 PM IST

ಮಂಗಳೂರು:ನಗರದ ಕುಲಶೇಖರ ಹಾಗೂ ನೀರುಮಾರ್ಗ ಬಳಿ ಮಾರಕಾಸ್ತ್ರ ತೋರಿಸಿ ದರೋಡೆ‌ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಆಕಾಶಭವನ ಆನಂದನಗರ ನಿವಾಸಿ ಧೀರಜ್(26), ಮಧ್ಯಪ್ರದೇಶ ರಾಜ್ಯದ ಬೆಂಡ್ ಜಿಲ್ಲೆಯ ಖೇರ ಉಮರಿ ಗ್ರಾಮದ ರಾಜೇಶ್ ತೋಮರ್, ಬಜ್ಪೆ ಅದ್ಯಪಾಡಿ ಗ್ರಾಮದ ರಾಕೇಶ್ ಕಂಬಳಿ(25), ತೆಂಕ ಎಕ್ಕಾರಿನ ರಾಜೇಶ್ ಆಚಾರ್ಯ ಎಕ್ಕಾರು(38), ಆಕಾಶಭವನ ನಂದನಪುರದ ಸಾಗರ್(23) ಬಂಧಿತರು.

ನಗರದ ನೀರುಮಾರ್ಗ ಮತ್ತು ಕುಲಶೇಖರದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಇಬ್ಬರನ್ನು ದರೋಡೆ ಮಾಡಿ ಮೊಬೈಲ್ ಹಾಗೂ ದ್ವಿಚಕ್ರ ವಾಹನವನ್ನು ದರೋಡೆ ಮಾಡಲಾಗಿತ್ತು‌. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಈ ಹಿಂದೆ ಕುಲಶೇಖರ ನಿವಾಸಿ ದೀಕ್ಷಿತ್ (32), ಸೋಮೇಶ್ವರದ ಚಂದ್ರಹಾಸ್ (34), ಕೋಟೆಕಾರ್​ನ ಪ್ರಜ್ವಲ್, ಸುರತ್ಕಲ್ ಚೇಳಾರ್​ನ ಸಂತೋಷ್ ಪೂಜಾರಿ ಯಾನೆ ನಾಯಿ ಸಂತು (38), ಹೇಮಚಂದ್ರರನ್ನು ಈಗಾಗಲೇ ಬಂಧಿಸಿದ್ದಾರೆ.

ಬಂಧಿತರೆಲ್ಲರೂ ಕೊಲೆ, ಕೊಲೆಯತ್ನ, ಹಲ್ಲೆ, ಗಾಂಜಾ, ಅಕ್ರಮ ಮರಳು ಸಾಗಣೆ ಪ್ರಕರಣಗಳಲ್ಲಿ ಭಾಗಿಯಾದವರು. ಇವರು ಅಪರಾಧ ಚಟುವಟಿಕೆಗಳಿಗಾಗಿ ಸುಮಾರು 15-20 ಮಂದಿಯ ಗ್ಯಾಂಗ್ ಕಟ್ಟಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details