ಕರ್ನಾಟಕ

karnataka

ETV Bharat / state

ಶ್ರೀಮಂತರಾಗುವ ಬಯಕೆಯಲ್ಲಿ ಮೀನುಗಾರಿಕೆ ವ್ಯಾಪಾರೀಕರಣವಾಗುತ್ತಿದೆ: ನಳಿನ್ ಕುಮಾರ್ ಕಟೀಲು - MP Nalin Kumar Kateel

ಪ್ರಧಾನಿ ಮೋದಿಯವರು ಮೀನುಗಾರಿಕೆಗೆ ಪ್ರತ್ಯೇಕ ಮಂತ್ರಾಲಯವನ್ನು ರಚಿಸಿದ್ದಾರೆ ಎಂದು ಸಂಸದ ನಳೀನ್​ ಕುಮಾರ್​ ಕಟೀಲು ಮಂಗಳೂರಿನಲ್ಲಿ ಹೇಳಿದ್ದಾರೆ.

dsdd
ಸಂಸದ ನಳಿನ್ ಕುಮಾರ್ ಕಟೀಲು

By

Published : Jun 30, 2020, 3:44 PM IST

ಮಂಗಳೂರು: ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಯಾವ ಸ್ಥಳದಲ್ಲಿ ಯಾವ ಸಂದರ್ಭದಲ್ಲಿ ಮೀನು ಹಿಡಿಯಬೇಕು ಎಂಬ ನಿಯಮಗಳಿವೆ. ಆದರೆ ಶ್ರೀಮಂತರಾಗುವ ಬಯಕೆಯಲ್ಲಿ ಮೀನುಗಾರಿಕೆ ವ್ಯಾಪಾರೀಕರಣವಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲು

ಕರಾವಳಿ ಮೀನುಗಾರಿಕೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಾವಳಿಯಲ್ಲಿ ಲೈಟ್ ಫಿಶಿಂಗ್ ಹಾಗೂ ಬುಲ್​ಟ್ರಾಲ್ ಎಂಬ ಎರಡು ವಿಧಗಳಿವೆ.ಈ ಮೂಲಕ ಮೀನುಗಳನ್ನು ರಕ್ಷಣೆ ಮಾಡುವ ಗುರಿ ಇತ್ತು‌. ಮೀನುಗಾರಿಕೆ ಉದ್ಯಮಶೀಲತೆಯೂ ಹೌದು. ಆದ್ದರಿಂದ ಮೀನುಗಾರಿಕೆಯನ್ನು ರಕ್ಷಣೆ ಮಾಡುವಂತಹ ಜವಾಬ್ದಾರಿ ಇರುವ ವ್ಯಕ್ತಿಗಳನ್ನು ಇಲಾಖೆಯಲ್ಲಿ ಸೇರಿಸುವ ಪ್ರಯತ್ನವನ್ನು ಕೋಟ ಶ್ರೀನಿವಾಸ ಪೂಜಾರಿ ಮಾಡುತ್ತಿದ್ದಾರೆ. ನಮ್ಮ ರಾಜ್ಯದ 315 ಕಿ.ಮೀ. ವ್ಯಾಪ್ತಿಯಲ್ಲಿ ಕರಾವಳಿ ಮೀನುಗಾರಿಕೆ ಹಬ್ಬಿದೆ. ರಾಜ್ಯದ ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಮೀನುಗಾರಿಕೆಯ ಕೊಡುಗೆ ಬಹಳಷ್ಟಿದೆ.

ಆದ್ದರಿಂದ ಮೀನುಗಾರಿಕೆಯನ್ನು ವೃತ್ತಿ ಎನ್ನುವುದಕ್ಕಿಂತಲೂ ಉದ್ಯಮ ಎನ್ನುವುದು ಸೂಕ್ತ. ಇಂದು ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಪರಿವರ್ತನೆಗಳಾಗಿ ಯಂತ್ರಗಳ ಬಳಕೆ ಬಂದಿದೆ. ಯಾವುದೇ ಸರ್ಕಾರ ಆಡಳಿತ ನಡೆಸಿದರೂ ಮೀನುಗಾರಿಕೆ ಹೊರಗಿರಿಸಿ ಚಿಂತನೆ ನಡೆಸಲು ಸಾಧ್ಯವಿಲ್ಲದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಮೀನುಗಾರಿಕೆಯ ಮಹತ್ವ ತಿಳಿಸಿದರು.

ABOUT THE AUTHOR

...view details