ಮಂಗಳೂರು: ಆಕಸ್ಮಿಕವಾಗಿ ಮೀನಿನ ಬಲೆಗೆ ಸಿಲುಕಿ ಮೀನುಗಾರನೊಬ್ಬ ಸಮುದ್ರಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮಂಗಳೂರು: ಬಲೆಗೆ ಸಿಲುಕಿದ ಮೀನುಗಾರ ಸಮುದ್ರಕ್ಕೆ ಬಿದ್ದು ಸಾವು - Mangaluru Fishermen Death Case
ಬಲೆಗೆ ಸಿಲುಕಿ ಸಮುದ್ರಕ್ಕೆ ಬಿದ್ದು ಮೀನುಗಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಈಜು ಬಲ್ಲವರಾಗಿರೂ ಕಾಲು ಬಲೆಯಲ್ಲಿ ಸಿಲುಕಿದ ಕಾರಣ ದಡ ಸೇರಲು ಸಾಧ್ಯವಾಗದೇ ಸಾವನ್ನಪ್ಪಿದ್ದಾರೆ.
![ಮಂಗಳೂರು: ಬಲೆಗೆ ಸಿಲುಕಿದ ಮೀನುಗಾರ ಸಮುದ್ರಕ್ಕೆ ಬಿದ್ದು ಸಾವು Fishermen Death In Mangaluru](https://etvbharatimages.akamaized.net/etvbharat/prod-images/768-512-9720009-528-9720009-1606757069308.jpg)
ಬೈಕಂಪಾಡಿ ಹೊಸಹಿತ್ಲು ನಿವಾಸಿ ನವೀನ್ ಕರ್ಕೇರ (32) ಮೃತ. ನವೀನ್ ಭಾನುವಾರ ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸಲು ಬಲೆ ಹಾಕುತ್ತಿದ್ದರು. ಈ ವೇಳೆ ಬಲೆಗೆ ಅವರ ಕಾಲು ಬೆರಳು ಸಿಲುಕಿದ್ದು ನೀರಿಗೆ ಬಿದ್ದು ನವೀನ್ ಮುಳುಗಿದ್ದಾರೆ. ಈಜು ಬಲ್ಲವರಾಗಿರೂ ಕಾಲು ಬಲೆಯಲ್ಲಿ ಸಿಲುಕಿದ ಕಾರಣ ದಡ ಸೇರಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಅವರನ್ನು ಇತರ ಮೀನುಗಾರರು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸುವಾಗಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ನವೀನ್ ಕರ್ಕೇರ ಅವಿವಾಹಿತರಾಗಿದ್ದು, ತಂದೆ ನಿಧನ ಹೊಂದಿದ್ದಾರೆ. ನವೀನ್ ಅವರ ಮೂವರು ಸಹೋದರರು ಹದಿಹರೆಯದಲ್ಲೇ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ. ಓರ್ವ ಮಡಿಕೇರಿಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟರೆ, ಇನ್ನೋರ್ವ ಯಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಮತ್ತೋರ್ವ ಅನಾರೋಗ್ಯದಿಂದ ಮೃತಪಟ್ಟಿದ್ದರು. ವೃದ್ಧಾಪ್ಯದಲ್ಲಿ ಆಸರೆಯಾಗಿದ್ದ ಉಳಿದೋರ್ವ ಮಗನೂ ಮೃತಪಟ್ಟಿರುವುದರಿಂದ ವೃದ್ಧ ತಾಯಿ ಕಂಗಾಲಾಗಿದ್ದಾರೆ.