ಕರ್ನಾಟಕ

karnataka

ETV Bharat / state

ದೋಣಿ ದುರಂತ: ವಾರ ಕಳೆದರೂ ಪತ್ತೆಯಾಗದ ಮೀನುಗಾರ ಅನ್ಸಾರ್​

ಕೋಸ್ಟ್ ಗಾರ್ಡ್​ ಸಿಬ್ಬಂದಿ ಎಷ್ಟು ಹುಡುಕಿದರೂ ಮೃತದೇಹ ಪತ್ತೆಯಾಗದ ಹಿನ್ನೆಲೆ, ಪತ್ತೆಗಾಗಿ ಕೇರಳ ಮತ್ತು ಲಕ್ಷದ್ವೀಪ ಕರಾವಳಿ ರಕ್ಷಣಾ ಪಡೆಗೆ ಲುಕ್‌ಔಟ್ ನೋಟಿಸ್ ನೀಡಿ ಮನವಿ ಮಾಡಲಾಗಿದೆ. ಆದರೆ, ಅಲ್ಲಿಂದಲೂ ಯಾವುದೇ ಮಾಹಿತಿ ಈವರೆಗೆ ಲಭಿಸಿಲ್ಲ ಎಂದು ತಿಳಿದು ಬಂದಿದೆ.

Search for the detection of Mangalore fisherman
ಮಂಗಳೂರು ದೋಣಿ ದುರಂತ

By

Published : Dec 6, 2020, 9:38 PM IST

ಮಂಗಳೂರು : ನಗರದ ಅಳಿವೆ ಬಾಗಿಲಿನಲ್ಲಿ ನಡೆದ ಬೋಟ್ ದುರಂತದಲ್ಲಿ ಸಮುದ್ರದ ಪಾಲಾದ ಮೀನುಗಾರ ಅನ್ಸಾರ್​ನ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆದಿದ್ದು, ವಾರ ಕಳೆದರೂ ಆತನ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ.

ಕೋಸ್ಟ್ ಗಾರ್ಡ್​ ಸಿಬ್ಬಂದಿ ಎಷ್ಟು ಹುಡುಕಿದರೂ ಮೃತದೇಹ ಪತ್ತೆಯಾಗದ ಕಾರಣ, ಪತ್ತೆಗಾಗಿ ಕೇರಳ ಮತ್ತು ಲಕ್ಷದ್ವೀಪ ಕರಾವಳಿ ರಕ್ಷಣಾ ಪಡೆಗೆ ಲುಕ್‌ಔಟ್ ನೋಟಿಸ್ ನೀಡಿ ಮನವಿ ಮಾಡಲಾಗಿದೆ. ಆದರೆ, ಅಲ್ಲಿಂದಲೂ ಯಾವುದೇ ಮಾಹಿತಿ ಈವರೆಗೆ ಲಭಿಸಿಲ್ಲ ಎಂದು ತಿಳಿದುಬಂದಿದೆ.

ಓದಿ : ಬೋಟ್ ದುರಂತ: ದಿನವಿಡೀ ಹುಡುಕಿದರೂ ಪತ್ತೆಯಾಗದ ಕೈತಪ್ಪಿಹೋದ ಶವ

ನ.30 ರಂದು ಸಂಜೆ ಶ್ರೀರಕ್ಷಾ ಎಂಬ ಬೋಟ್ ಮೀನು ತುಂಬಿಕೊಂಡು ಮರಳಿ ಬರುವಾಗ ಅಳಿವೆ ಬಾಗಿಲಿನಲ್ಲಿ ದುರಂತಕ್ಕೀಡಾಗಿತ್ತು. ಪರಿಣಾಮ ಬೋಟ್​ನಲ್ಲಿದ್ದ 25 ಮಂದಿಯಲ್ಲಿ 19 ಮಂದಿ ದಡ ಸೇರಿದ್ದರು‌. ಆರು ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದರು‌. ಈ ಪೈಕಿ ಐವರ ಮೃತದೇಹ ಈಗಾಗಲೇ ಪತ್ತೆಯಾಗಿವೆ. ಇನ್ನೋರ್ವ ಮೀನುಗಾರ ಅನ್ಸಾರ್​ ಬಗ್ಗೆ ಮಾತ್ರ ಯಾವುದೇ ಸುಳಿವು ಸಿಕ್ಕಿಲ್ಲ.

ABOUT THE AUTHOR

...view details