ಮಂಗಳೂರು:ನಗರದ ಮೀನುಗಾರಿಕಾ ಬಂದರ್‌ನಲ್ಲಿ ಶನಿವಾರ ಮಧ್ಯರಾತ್ರಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮೀನಿನ ಬಲೆಗಳು ಸುಟ್ಟು ಕರಕಲಾಗಿವೆ. ಬೋಟ್‌ನಲ್ಲಿ ಬಲೆಗಳನ್ನು ಒಂದೆಡೆ ರಾಶಿ ಹಾಕಲಾಗಿತ್ತು. ರಾತ್ರಿ 12.30 ರ ಹೊತ್ತಿಗೆ ಅನಾಹುತ ಘಟಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳೂರು: ಮೀನಿನ ಬಲೆಯ ರಾಶಿಗೆ ಬೆಂಕಿ, ಲಕ್ಷಾಂತರ ನಷ್ಟ - ಮಂಗಳೂರು ಮೀನುಗಾರಿಕಾ ಬಂದರ್
ಮಂಗಳೂರು ಮೀನುಗಾರಿಕಾ ಬಂದರ್‌ನಲ್ಲಿ ಶನಿವಾರ ಮಧ್ಯರಾತ್ರಿ ಅಗ್ನಿ ಅನಾಹುತ ಸಂಭವಿಸಿದೆ.
ಮಂಗಳೂರು ಬಂದರಿನ ಮೀನಿನ ಬಲೆರಾಶಿಗೆ ಬೆಂಕಿ ಅಪಾರ ನಷ್ಟ
ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಸಮೀಪದಲ್ಲಿದ್ದ ಬೋಟ್‌ಗಳಿಗೆ ಯಾವುದೇ ಹಾನಿಯಾಗಿಲ್ಲ. ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂಓದಿ:ಕಲ್ಯಾಣ ಮಂಟಪಗಳಲ್ಲಿ ಕ್ಯಾಮರಾ ಕಳ್ಳತನ; ಪದವಿ ವಿದ್ಯಾರ್ಥಿಯ ಬಂಧನ
Last Updated : Nov 13, 2022, 2:51 PM IST