ಸುರತ್ಕಲ್(ಮಂಗಳೂರು):ಸುಪ್ರೀಮ್ ಹಾಲ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ಗೆ ಮೀನಿನ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳೂರಿನ ಸುರತ್ಕಲ್ ಬಳಿ ನಡೆದಿದೆ.
ಘಟನೆ ವಿವರ:
ಸುರತ್ಕಲ್(ಮಂಗಳೂರು):ಸುಪ್ರೀಮ್ ಹಾಲ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ಗೆ ಮೀನಿನ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳೂರಿನ ಸುರತ್ಕಲ್ ಬಳಿ ನಡೆದಿದೆ.
ಘಟನೆ ವಿವರ:
ಸುರತ್ಕಲ್ ಸುಪ್ರೀಮ್ ಹಾಲ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರತ್ಕಲ್ ಕಡೆಗೆ ಬೈಕ್ನಲ್ಲಿ ಯೂ ಟರ್ನ್ ತೆಗೆದುಕೊಳ್ಳುತ್ತಿದ್ದಾಗ ಉಡುಪಿ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಮೀನಿನ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿಯನ್ನು ಸೂರಿಂಜೆ ನಿವಾಸಿ ವಿನೋದ್ ಕುಮಾರ್( 45) ಎಂದು ಗುರುತಿಸಲಾಗಿದೆ. ಲಾರಿಯಡಿಗೆ ಸಿಕ್ಕಿಕೊಂಡ ಸವಾರನನ್ನು ಲಾರಿ ಒಂದು ಮೀಟರ್ವರೆಗೆ ಎಳೆದೊಯ್ದಿದೆ. ಬೈಕ್ ಲಾರಿಯಡಿಗೆ ಸಿಲುಕಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ಅಪಘಾತದ ದೃಶ್ಯ ಹೆದ್ದಾರಿ ಬದಿಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಬೈಕಂಪಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.