ಕರ್ನಾಟಕ

karnataka

ETV Bharat / state

ಹರೇಕಳ ಗ್ರಾಮ ಪಂಚಾಯತ್ ನಿರ್ಣಯದಂತೆ ಮೊದಲ ದಿನದ ಲಾಕ್‍ಡೌನ್ ಯಶಸ್ವಿ

ಹರೇಕಳ ಗ್ರಾಮದ ಜನರು, ಪಂಚಾಯತ್ ಅಧಿಕಾರಿಗಳು ವಿಶೇಷ ಸಭೆಯಲ್ಲಿ ತೀರ್ಮಾನಿಸಿದಂತೆ ಸೋಮವಾರ ಅಂಗಡಿಗಳು 12 ಗಂಟೆಯವರೆಗೆ ವ್ಯಾಪಾರ ನಡೆಸಿವೆ. ಬಸ್ ಸಂಚಾರ ಸೇರಿದಂತೆ ಹೊರಗಿನ ಖಾಸಗಿ ವಾಹನಗಳಿಗೆ ಗ್ರಾಮ ಪ್ರವೇಶಕ್ಕೆ ಅವಕಾಶ ನೀಡಿಲ್ಲ.

ಮೊದಲ ದಿನದ ಲಾಕ್‍ಡೌನ್ ಯಶಸ್ವಿ
ಮೊದಲ ದಿನದ ಲಾಕ್‍ಡೌನ್ ಯಶಸ್ವಿ

By

Published : Jul 7, 2020, 10:05 AM IST

ಉಳ್ಳಾಲ (ದ. ಕನ್ನಡ): ಹರೇಕಳ ಗ್ರಾಮದಲ್ಲಿ ಐವರಿಗೆ ಸೋಂಕು ದೃಢವಾಗಿದ್ದು ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ತಡೆಯುವ ಪ್ರಯತ್ನವಾಗಿ ಹರೇಕಳ ಗ್ರಾಮದಲ್ಲಿ ಲಾಕ್‍ಡೌನ್ ಮಾಡಲಾಗಿದೆ. ಪೊಲೀಸ್ ಸಹಕಾರವಿಲ್ಲದೆ ಗ್ರಾಮದ ಜನರು ಪಂಚಾಯತ್ ನಿರ್ಣಯದಂತೆ ಮೊದಲ ದಿನದ ನಿರ್ಬಂಧವನ್ನು ಯಶಸ್ವಿಗೊಳಿಸಿದ್ದಾರೆ.

ಹರೇಕಳ ಗ್ರಾಮದಲ್ಲಿ ಮೊದಲ ದಿನದ ಲಾಕ್‍ಡೌನ್ ಯಶಸ್ವಿ

ದ್ವಿಚಕ್ರ ವಾಹನ ಇರುವವರು ದೈನಂದಿನ ಕೆಲಸಗಳಿಗೆ ತೆರಳಲು ಆವಕಾಶ ನೀಡಲಾಗಿದೆ. ಉಳಿದಂತೆ ಗ್ರಾಮಚಾವಡಿ ನ್ಯೂಪಡ್ಪು ಮಾರ್ಗವಾಗಿ ಮಂಗಳೂರಿಗೆ ತೆರಳುವ ಕೋಟಿಪದವು, ಮಿಷನ್ ಕಾಂಪೌಂಡ್, ತಾಕಟೆ ಸೇರಿದಂತೆ ಕೊಣಾಜೆ ಗ್ರಾಮದ ಜನರಿಗೆ ಸಂಚರಿಸಲು ಆವಕಾಶವಿದೆ.

ಚೆಕ್ ಪೋಸ್ಟ್‌ಗಳಲ್ಲಿ ಗ್ರಾಮದ ವಾರಿಯರ್ಸ್ ತಂಡದ ಪಹರೆ:

ಅಂಬ್ಲಮೊಗರು ಗ್ರಾಮದಿಂದ ಹರೇಕಳ ಗ್ರಾಮವನ್ನು ಸಂಪರ್ಕಿಸುವ ಎಲಿಯಾರ್ ದೆಬ್ಬೇಲಿ ರಸ್ತೆ, ಕೊಣಾಜೆ ಮತ್ತು ಅಂಬ್ಲಮೊಗರು ಗ್ರಾಮದ ಗಡಿಭಾಗವಾದ ಒಡ್ಡೆದಗುಳಿ ಸಮೀಪದ ಎಸ್‍ಬಿಐ ಬ್ಯಾಂಕ್ ಬಳಿ ಮತ್ತು ಕೊಣಾಜೆ–ಹರೇಕಳ ಗ್ರಾಮ ಸಂಪರ್ಕಿಸುವ ಗ್ರಾಮ ಚಾವಡಿ ಕೋಟಿಪದವು ಬಳಿ ಮೂರು ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ. ಇಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರತೀ ಚೆಕ್‌ಪೋಸ್ಟ್‌ನಲ್ಲಿ 10 ಜನರ ತಂಡ ಜನರ ದೇಹದ ಉಷ್ಣತೆಯ ತಪಾಸಣೆ ಮತ್ತು ಹೆಸರು ನೋಂದಾಯಿಸುತ್ತಿದ್ದಾರೆ. ಮಧ್ಯಾಹ್ನದಿಂದ ರಾತ್ರಿ 7 ಗಂಟೆವರೆಗೆ ಎರಡು ಪಾಳಿಯಲ್ಲಿ ಒಟ್ಟು 60 ಮಂದಿ ಗ್ರಾಮದ ಗಡಿ ಕಾಯುವ ಕೆಲಸ ಮಾಡುತ್ತಿದ್ದಾರೆ.

ABOUT THE AUTHOR

...view details