ಮಂಗಳೂರು: ಯುಎಇಯಿಂದ ನಾಳೆ ಮೊದಲ ಚಾರ್ಟರ್ಡ್ ವಿಮಾನ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಯುಎಇ ಮೂಲದ ಅನಿವಾಸಿ ಕನ್ನಡಿಗ ಉದ್ಯಮಿ ಪ್ರವೀಣ್ ಶೆಟ್ಟಿಯವರು ಖಾಸಗಿಯಾಗಿ ಬುಕ್ ಮಾಡಿರುವ ಈ ವಿಮಾನ ಬೆಳಗ್ಗೆ 9.30ಕ್ಕೆ ಯುಎಇಯಿಂದ ಹೊರಟು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1.20 ಸುಮಾರಿಗೆ ಆಗಮಿಸಲಿದೆ.
ನಾಳೆ ಯುಎಇಯಿಂದ ಮಂಗಳೂರಿಗೆ ಆಗಮಿಸಲಿರುವ ಮೊದಲ ಚಾರ್ಟರ್ಡ್ ವಿಮಾನ - ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಯುಎಇಯಿಂದ ನಾಳೆ ಮಂಗಳೂರಿಗೆ ಮೊದಲ ಚಾರ್ಟರ್ಡ್ ವಿಮಾನ ಆಗಮಿಸಲಿದ್ದು, ಪ್ರಯಾಣಿಕರನ್ನು ಮಂಗಳೂರು ಹಾಗೂ ಉಡುಪಿಯ ಹೋಟೆಲ್ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು.

ಯುಎಇಯಿಂದ ನಾಳೆ ಮೊದಲ ಚಾರ್ಟರ್ಡ್ ವಿಮಾನ ಮಂಗಳೂರಿಗೆ
ಲಾಕ್ಡೌನ್ ಬಳಿಕ ಯುಎಇಯಿಂದ ಮಂಗಳೂರಿಗೆ ಆಗಮಿಸುವ ಪ್ರಥಮ ಚಾರ್ಟರ್ಡ್ ವಿಮಾನ ಇದಾಗಿದೆ. ಸ್ಪೈಸ್ ಜೆಟ್ ವಿಮಾನವನ್ನು ಬುಕ್ ಮಾಡಲಾಗಿದ್ದು, ಈ ವಿಮಾನದಲ್ಲಿ ಆರು ಮಕ್ಕಳು ಸೇರಿದಂತೆ 183 ಮಂದಿ ಆಗಮಿಸಲಿದ್ದಾರೆ.
ಫಾರ್ಚೂನ್ ಗ್ರೂಪ್ ಹೋಟೆಲ್ ಪಾಲುದಾರ ಪ್ರವೀಣ್ ಶೆಟ್ಟಿ, ತಮ್ಮ ಹೋಟೆಲ್ ಸಿಬ್ಬಂದಿ ಹಾಗೂ ಇತರರನ್ನು ಭಾರತಕ್ಕೆ ಕಳುಹಿಸಿಕೊಡಲು ಈ ವಿಮಾನವನ್ನು ಬುಕ್ ಮಾಡಿದ್ದಾರೆ. ಇದರಲ್ಲಿ ಮಂಗಳೂರು, ಉಡುಪಿ, ಕುಂದಾಪುರ ಹಾಗೂ ಕಾಸರಗೋಡು ನಿವಾಸಿಗಳು ಬರಲಿದ್ದಾರೆ. ಈ ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರನ್ನು ಮಂಗಳೂರು ಹಾಗೂ ಉಡುಪಿಯ ಹೋಟೆಲ್ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ.