ಸುಳ್ಯ:ಕಡಬ ತಾಲೂಕಿನ ಕುದ್ಮಾರು ಶಾಂತಿಮೊಗರು ತಿರುವಿನಲ್ಲಿ ಫೆ.14ರ ಮಧ್ಯರಾತ್ರಿ ಗೂಡಂಗಡಿಗೆ ಬೆಂಕಿ ಬಿದ್ದು ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಸುಳ್ಯದಲ್ಲಿ ಬೆಂಕಿ ಬಿದ್ದು ಗೂಡಂಗಡಿ ಸಂಪೂರ್ಣ ಭಸ್ಮ!
ಕುದ್ಮಾರು ಶಾಂತಿಮೊಗರು ತಿರುವಿನಲ್ಲಿ ಫೆ.14ರ ಮಧ್ಯರಾತ್ರಿ ಗೂಡಂಗಡಿಯೊಂದಕ್ಕೆ ಬೆಂಕಿ ಬಿದ್ದು ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಕುದ್ಮಾರು ಎಂಬಲ್ಲಿ 5ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಫೆ.14ರಂದು ಕುದ್ಮಾರಿನ ಶಾಂತಿಮೊಗರು ತಿರುವಿನಲ್ಲಿ ಅಂಗಡಿ ಹೊಂದಿರುವ ಅಬ್ದುಲ್ ಎಂಬಾತನನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದರು. ಅಂದು ರಾತ್ರಿಯೇ ಈತನಿಗೆ ಸೇರಿದ್ದ ಗೂಡಂಗಡಿಗೆ ಬೆಂಕಿ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇನ್ನು ಮಧ್ಯರಾತ್ರಿ ಸುಮಾರು 2 ಗಂಟೆಗಳ ಸಮಯದಲ್ಲಿ ಅಂಗಡಿಗೆ ಬೆಂಕಿ ಬಿದ್ದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದ್ದು, ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಈ ಕುರಿತಾಗಿ ತನಿಖೆ ನಡೆಯುತ್ತಿದ್ದು, ಸ್ಥಳದಲ್ಲಿ ಕಡಬ, ಪುತ್ತೂರು, ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸ್ ಭದ್ರತೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.