ಸುಳ್ಯ: ತಾಲೂಕಿನ ಬಳ್ಪದ ಎಡೋಣಿ ಎಂಬಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಧಗಧಗನೇ ಹೊತ್ತಿ ಉರಿದ ಕಾರು : ಪ್ರಯಾಣಿಕರು ಅಪಾಯದಿಂದ ಪಾರು - sulya news
ಪಂಜ ನಿವಾಸಿ ಕೇಶವ ಆಚಾರಿ ಎಂಬುವರು ತಮ್ಮ ಕಾರಿನಲ್ಲಿ ಏನೆಕಲ್ಲು ಕಡೆಯಿಂದ ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಎಡೋಣಿ ತಲುಪುತ್ತಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರ್ ಸಂಪೂರ್ಣ ಭಸ್ಮವಾಗಿದೆ.
ಧಗಧಗನೇ ಹೊತ್ತಿ ಉರಿದ ಕಾರು
ಪಂಜ ನಿವಾಸಿ ಕೇಶವ ಆಚಾರಿ ಎಂಬುವರು ತಮ್ಮ ಕಾರಿನಲ್ಲಿ ಏನೆಕಲ್ಲು ಕಡೆಯಿಂದ ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಎಡೋಣಿ ತಲುಪುತ್ತಿದ್ದಂತೆ ಕಾರಿನ ಎಂಜಿನ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಿನಿಂದ ಇಳಿದ ಕೇಶವ ಅವರು ಕಾರಿನ ಬೋನೆಟ್ ತೆರೆಯುವಷ್ಟರಲ್ಲಿ ಬೆಂಕಿ ಸಂಪೂರ್ಣವಾಗಿ ಆವರಿಸಿದ್ದು, ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದೆ ಎನ್ನಲಾಗಿದೆ.
ಕಾರಿನಲ್ಲಿ ಸಂಚರಿಸುತ್ತಿದ್ದವರಿಗೆ ಅದೃಷ್ಟವಶಾತ್ ಯಾವುದೇ ತೊಂದರೆಗಳು ಆಗಿಲ್ಲ ಎಂದು ತಿಳಿದು ಬಂದಿದೆ.