ಮಂಗಳೂರು: ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ನಲ್ಲಿರುವ ಹೋಟೆಲ್ವೊಂದರಲ್ಲಿ ಗ್ಯಾಸ್ ಸ್ಫೋಟದಿಂದ ಬೆಂಕಿ ಬಿದ್ದು ಓರ್ವ ಗಾಯಗೊಂಡಿದ್ದಾನೆ.
ಮಂಗಳೂರಲ್ಲಿ ಗ್ಯಾಸ್ ಸ್ಪೋಟಗೊಂಡು ಹೋಟೆಲ್ಗೆ ಬೆಂಕಿ: ಓರ್ವನಿಗೆ ಗಾಯ -
ಮಂಗಳೂರು ನಗರದ ಹೋಟೆಲ್ವೊಂದ ಅಡುಗೆ ಅನಿಲ ಸ್ಪೋಟಗೊಂಡು ಬೆಂಕಿ ತಗುಲಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ.
ಬೆಂಕಿ ಆರಿಸುತ್ತಿರುವ ಅಗ್ನಿಶಾಮಕದಳ ಸಿಬ್ಬಂದಿ
ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಕಟ್ಟಡವೊಂದರಲ್ಲಿದ್ದ ಸಣ್ಣ ಹೋಟೆಲ್ನಲ್ಲಿ ಈ ಅವಘಡ ಸಂಭವಿಸಿದೆ. ಗ್ಯಾಸ್ ನಿಂದ ಹೊರಬಂದ ಬೆಂಕಿ ಹೋಟೆಲ್ ಸಿಬ್ಬಂದಿ ಅಶ್ರಫ್ ಎಂಬುವರ ಮುಖಕ್ಕೆ ತಗುಲಿದ್ದು, ತೀವ್ರ ಗಾಯವಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಗ್ನಿಶಾಮಕದಳದ ಎರಡು ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.