ಐಸ್ಕ್ರೀಮ್ ತಯಾರಿಕಾ ಘಟಕದಲ್ಲಿ ಅಗ್ನಿ ದುರಂತ ಮಂಗಳೂರು: ನಗರದ ಹೊರವಲಯದ ಅಡ್ಯಾರ್ನಲ್ಲಿರುವ ಐಸ್ ಕ್ರೀಮ್ ದಾಸ್ತಾನು ಹಾಗೂ ತಯಾರಿಕಾ ಘಟಕದಲ್ಲಿ ತಡರಾತ್ರಿ ಅಗ್ನಿ ಅನಾಹುತ ಸಂಭವಿಸಿತು. ಹರ್ಷಮಣಿ ಎಸ್.ರೈ ಎಂಬವರಿಗೆ ಸೇರಿದ ಪೋಲಾರ್ ಐಸ್ ಕ್ರೀಂ ಸುಪರ್ ಸ್ಟಾಕಿಸ್ಟ್ ಹೆಸರಿನ ದಾಸ್ತಾನು ಮಳಿಗೆ ಇದಾಗಿದೆ. ಮೊದಲು ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಐಸ್‌ಕ್ರಿಮ್ ತಯಾರಿಕಾ ಘಟಕಕ್ಕೂ ವ್ಯಾಪಿಸಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ವಾಹನವೊಂದು ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮೂರು ಅಗ್ನಿಶಾಮಕ ವಾಹನಗಳು ಸುಮಾರು ನಾಲ್ಕು ತಾಸು ಕಾರ್ಯಾಚರಣೆ ನಡೆಸಿವೆ.
ಇದನ್ನೂ ಓದಿ:ಜಿಗಣಿ ಪಟ್ಟಣದಲ್ಲಿ ಆಟೋ ಮೊಬೈಲ್ಸ್ ಆಯಿಲ್ ಅಂಗಡಿಗೆ ಬೆಂಕಿ: 22 ಲಕ್ಷ ರೂ. ಸರಕು ಸುಟ್ಟು ಭಸ್ಮ
ಇತರೆ ಅಗ್ನಿ ಅನಾಹುತ ಘಟನೆಗಳು..: ಆನೇಕಲ್ನಜಿಗಣಿ ಪಟ್ಟಣದ ಎಪಿಸಿ ಪುರಸಭೆ ಮುಖ್ಯರಸ್ತೆಯಲ್ಲಿರುವ ಓಂಸಾಯಿ ಆಟೋ ಮೊಬೈಲ್ಸ್ ಆಯಿಲ್ ಅಂಗಡಿಯಲ್ಲಿ ನಿನ್ನೆ ಬೆಂಕಿ ಕಾಣಿಸಿಕೊಂಡಿತ್ತು. ಇಡೀ ಕಟ್ಟಡದಲ್ಲಿ ಹೊಗೆ ಆವರಿಸಿತ್ತು. ಮಂಜು ಎಂಬ ಹೆಸರಿನ ಕಟ್ಟಡದ ನೆಲಮಹಡಿಯ ಆಯಿಲ್ ಅಂಗಡಿಯಲ್ಲಿದ್ದ ಆಯಿಲ್ ಕ್ಯಾನ್ ಸ್ಫೋಟವಾಗಿತ್ತು. ಪಕ್ಕದಲ್ಲೇ ಕೆಟ್ಟು ನಿಂತಿದ್ದ ದ್ವಿಚಕ್ರ ವಾಹನಗಳಿಗೂ ಬೆಂಕಿ ತಗುಲಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಕಿ ಹೊತ್ತಿ ಉರಿದಿದೆ. ಆನೇಕಲ್ನ ಅಗ್ನಿಶಾಮಕದಳ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದಾಗ ಕಾಣಿಸಿಕೊಂಡ ಬೆಂಕಿ.. ಸಿರುಗುಪ್ಪ ಬಳಿ ಹೊತ್ತಿ ಉರಿದ ಶಾಲಾ ಬಸ್
ಸೋಮವಾರ ನಡೆದ ಮತ್ತೊಂದು ಘಟನೆಯಲ್ಲಿ ಬಳ್ಳಾರಿಯಲ್ಲಿ ಚಲಿಸುತ್ತಿದ್ದ ಶಾಲಾ ಬಸ್‌ಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಸಿರುಗುಪ್ಪ ಹಾಗೂ ತೆಕ್ಕಲಕೋಟೆ ನಡುವಿನ ರಸ್ತೆಯಲ್ಲಿ ಘಟನೆ ನಡೆಯಿತು. ಸಿರುಗುಪ್ಪದಿಂದ ತೆಕ್ಕಲಕೋಟೆ ಪಟ್ಟಣಕ್ಕೆ ತೆರಳುತ್ತಿದ್ದ ಶಾಲಾ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ನಲ್ಲಿ 50 ಮಕ್ಕಳು ಪ್ರಯಾಣಿಸುತ್ತಿದ್ದರು. ವಿದ್ಯಾರ್ಥಿಗಳು ಹಾಗೂ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿರುಗುಪ್ಪ ಪಟ್ಟಣದ ವಿಶ್ವಜ್ಯೋತಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ಬಸ್ ಇದಾಗಿದೆ. ತಾಂತ್ರಿಕ ದೋಷದಿಂದ ಬಸ್ನ ಇಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಚಾಲಕ ತಕ್ಷಣ ಮಕ್ಕಳನ್ನು ಕೂಡಲೇ ಕೆಳಗಿಳಿಸಿ ದುರ್ಘಟನೆ ತಪ್ಪಿಸಿದ್ದಾರೆ. ಮಕ್ಕಳು ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದರು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ:ಕಾರವಾರ: ಹತ್ತಾರು ಎಕರೆ ಅರಣ್ಯ ಅಗ್ನಿಗಾಹುತಿ