ದಾವಣಗೆರೆ: ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಹೆಜ್ಜೇನು ದಾಳಿ ಸಂಬಂಧ ಮಕ್ಕಳು ಹಾಗು ಸಿಬ್ಬಂದಿ ಭಯಭೀತರಾಗಿದ್ದರು. ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಮಕ್ಕಳನ್ನು ರಕ್ಷಿಸಿಸಿದರು.
ಈ ಘಟನೆ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಕೂಗಳತೆಯಲ್ಲಿ ಇರುವ ಪೊಲೀಸ್ ಪಬ್ಲಿಕ್ ಶಾಲೆಯ ಮುಖ್ಯದ್ವಾರದಲ್ಲಿಯೇ ಹೆಜ್ಜೇನು ಗೂಡು ಕಟ್ಟಿತ್ತು. ಏಕಾಏಕಿ ಹೆಜ್ಜೇನುಗಳು ತಮ್ಮ ಗೂಡಿನಿಂದ ಹಾರಿ ಗುರುವಾರ ದಾಳಿ ಮಾಡಲು ಮುಂದಾಗಿದ್ದವು. ಇದನ್ನು ಗಮನಿಸಿದ ಶಾಲಾ ಸಿಬ್ಬಂದಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ರವಾನಿಸಿದ್ದರು.
ಹೆಜ್ಜೆನು ದಾಳಿಯಿಂದ ಶಾಲೆಯ ಮಕ್ಕಳನ್ನು ರಕ್ಷಿಸಿದ ಅಗ್ನಿಶಾಮ ದಳ ಸುದ್ದಿ ತಿಳಿದ ತಕ್ಷಣವೇ ಸಕಾಲಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ, ಮಕ್ಕಳನ್ನೆಲ್ಲ ಒಂದು ಕಡೆ ಸೇರಿಸಿ ರೋಪ್ ಮೂಲಕ ಮಕ್ಕಳ ರಕ್ಷಣೆ ಮಾಡಿದರು. ಅದೃಷ್ಟವಶಾತ್ ಮಕ್ಕಳು ಹಾಗೂ ಸಿಬ್ಬಂದಿ ಹೆಜ್ಜೇನು ದಾಳಿಯಿಂದ ಪಾರಾಗಿದ್ದಾರೆ. ಇನ್ನು ಮಕ್ಕಳನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಪರ ಪ್ರಶಂಸೆಯ ಮಹಾಪೂರವೇ ಹುರಿದು ಬರುತ್ತಿದೆ.
ಶಾಲೆಯಲ್ಲಿದ್ದ ಮಕ್ಕಳ ಬಗ್ಗೆ ಪೋಷಕರಲ್ಲಿ ಆತಂಕದ ವಾತವರಣ ನಿರ್ಮಾಣವಾಗಿತ್ತು. ಆದರೆ ಈ ಘಟನೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆ ಆಗಿಲ್ಲ. ಮಕ್ಕಳೆಲ್ಲರೂ ಸೇಫ್ ಆಗಿ ಮನೆ ಸೇರಿದ್ದರಿಂದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಓದಿ:ನೀರಿನ ಟ್ಯಾಂಕ್ ಏರಿ ಜೇನು ಸವಿದ ಕರಡಿಗಳು ..ವಿಡಿಯೋ