ಮೂಡುಬಿದ್ರೆ: ಮೂಡುಬಿದ್ರೆ ತಾಲೂಕಿನ ವಾಲ್ಪಾಡಿ ಗ್ರಾ.ಪಂ ಕಟ್ಟಡದಲ್ಲಿ ಶುಕ್ರವಾರ ಸಾಯಂಕಾಲ ಶಾರ್ಟ್ ಸರ್ಕ್ಯೂಟ್ ನಿಂದ ಅಕಸ್ಮಾತ್ ಬೆಂಕಿ ಅವಘಡವುಂಟಾಗಿ ಅಪಾರ ನಷ್ಟವುಂಟಾಗಿದೆ.
ಮೂಡುಬಿದ್ರೆ ವಾಲ್ಪಾಡಿ ಗ್ರಾ.ಪಂ. ಕಟ್ಟಡದಲ್ಲಿ ಬೆಂಕಿ:ರೂ. 3 ಲಕ್ಷದ ಸ್ವತ್ತು ನಷ್ಟ - ಗ್ರಾಮ ಪಂಚಾಯ್ತಿ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್
ಮೂಡುಬಿದ್ರೆ ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯ್ತಿ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅಪಾರ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಬೆಂಕಿಗಾಹುತಿ
ಸಾಯಂಕಾಲ ವಾಲ್ಪಾಡಿ ಗ್ರಾಮ ಪಂಚಾಯಿತಿ ಕಚೇರಿ ಮುಚ್ಚಿದ ಬಳಿಕ ಕಟ್ಟಡದಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಆಗ್ನಿಶಾಮಕದಳವರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು.
ಬೆಂಕಿ ಅನಾಹುತಕ್ಕೆ ಕಚೇರಿಯಲ್ಲಿದ್ದ 125 ಪ್ಲಾಸ್ಟಿಕ್ ಕುರ್ಚಿ ಹಾಗೂ ಕಟ್ಟಡದ ಪೀಠೋಪಕರಣ ಬೆಂಕಿಗಾಹುತಿಯಾಗಿದೆ. ದಾಖಲೆಗಳು ಸುರಕ್ಷಿತವಾಗಿವೆ ಎಂದು ತಿಳಿದುಬಂದಿದೆ.