ಕರ್ನಾಟಕ

karnataka

ETV Bharat / state

ಜನರಿಕ್ ಔಷಧಿ ಮಳಿಗೆಗೆ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ಸೊತ್ತು ನಾಶ - etv bharat

ಶಾರ್ಟ್ ಸರ್ಕ್ಯೂಟ್ ಪರಿಣಾಮ ಪ್ರಧಾನ ಮಂತ್ರಿ ಜನರಿಕ್ ಔಷಧ ಕೇಂದ್ರಕ್ಕೆ ಬೆಂಕಿ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಲಕ್ಷಾಂತರ ರೂ ಮೌಲ್ಯದ ಔಷಧಗಳು ಬೆಂಕಿಗಾಹುತಿಯಾಗಿದೆ.

ಜೆನರಿಕ್ ಔಷಧಿ ಮಳಿಗೆಗೆ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ಸೊತ್ತು ನಾಶ

By

Published : Aug 6, 2019, 12:50 PM IST

ಮಂಗಳೂರು: ಪ್ರಧಾನ ಮಂತ್ರಿ ಜನರಿಕ್ ಔಷಧ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ನಗರದ ತೊಕ್ಕೊಟ್ಟು ಒಳಪೇಟೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಔಷಧಿಗಳು, ಫ್ರಿಡ್ಜ್ ಸೇರಿ‌ದಂತೆ ವಿವಿಧ ವಸ್ತುಗಳು ಸುಟ್ಟು ಭಸ್ಮವಾಗಿದೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಬೆಂಕಿ‌ ನಂದಿಸುವ ಕಾರ್ಯ ಮಾಡಿತು. ಕಾರ್ಯಾಚರಣೆ ವೇಳೆ ಔಷಧಿ ಅಂಗಡಿಯಲ್ಲಿದ್ದ ಬ್ಯಾಟರಿ ಸ್ಪೋಟಗೊಂಡ ಪರಿಣಾಮ ಅಗ್ನಿಶಾಮಕ ದಳದ ಸಿಬ್ಬಂದಿಯ ಮುಖಕ್ಕೆ ಗಾಯವಾದ ಘಟನೆ ನಡೆಯಿತು. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details