ಮಂಗಳೂರು:ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ನಗರದಲ್ಲಿ ನಡೆದ ಹಿಂಸಾಚಾರ, ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸ್ ಗುಂಡಿಗೆ ಬಲಿಯಾದ ಇಬ್ಬರು ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಂಗಳೂರು ಹಿಂಸಾಚಾರ: ಮೃತ ವ್ಯಕ್ತಿಗಳು ಸೇರಿ ಹಲವರ ವಿರುದ್ಧ ಎಫ್ಐಆರ್ ದಾಖಲು - Mangaluru CAA Protest Violence FIR against accused
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಮಂಗಳೂರು ನಗರದಲ್ಲಿ ನಡೆದ ಹಿಂಸಾಚಾರ, ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸ್ ಗುಂಡಿಗೆ ಬಲಿಯಾದ ಇಬ್ಬರು ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೃತ ವ್ಯಕ್ತಿಗಳು ಸೇರಿ ಹಲವರ ವಿರುದ್ಧ ಎಫ್ಐಆರ್ ದಾಖಲು
ಮೃತಪಟ್ಟ ಜಲೀಲ್ ಹಾಗೂ ನೌಸೀನ್ ಸಹಿತ 29 ಮಂದಿಯ ಮೇಲೆ ಉತ್ತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದರೆ, ಪಶ್ಚಿಮ ಪೊಲೀಸ್ ಠಾಣೆಯಲ್ಲಿ 45 ಮಂದಿಯ ಮೇಲೆ ಎಫ್ಐಆರ್ ದಾಖಲಾಗಿದೆ.
ಘಟನೆಯಲ್ಲಿ ಮೃತಪಟ್ಟ ನಗರದ ಕಂದಕ್ ನಿವಾಸಿ ಜಲೀಲ್ ಅವರನ್ನು 3ನೇ ಆರೋಪಿ ಎಂದು ಹಾಗೂ ಕುದ್ರೋಳಿ ನಿವಾಸಿ ನೌಸೀನ್ನ್ನು 8ನೇ ಆರೋಪಿ ಎಂದು ಎಫ್ಐಆರ್ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.