ಕರ್ನಾಟಕ

karnataka

ETV Bharat / state

ಸಾಲದ ಆಮಿಷವೊಡ್ಡಿ 3 ತಿಂಗಳ ಇಎಂಐ ಕಟ್ಟಿಸಿಕೊಂಡು ವಂಚನೆ: ದೆಹಲಿಯಲ್ಲಿ ಆರೋಪಿ ಸೆರೆ - mangalore

ಶೇ 5%ಬಡ್ಡಿಗೆ ಸಾಲ ನೀಡುವ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಲಾಗಿದ್ದು, ಒಬ್ಬನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮಂಗಳೂರು ಪೋಲಿಸರೊಂದಿಗೆ ವಶಪಡಿಸಿಕೊಂಡ ವಸ್ತುಗಳು

By

Published : Jul 5, 2019, 3:17 PM IST

ಮಂಗಳೂರು:ಶೇ5%ಬಡ್ಡಿಗೆ ಸಾಲ ನೀಡುವ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಲಾಗಿದ್ದು, ಒಬ್ಬನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರಿನ ಒಬ್ಬ ವ್ಯಕ್ತಿಗೆ 5%ರಲ್ಲಿ ಬಡ್ಡಿ ನೀಡುವ ಆಮಿಷವೊಡ್ಡಿ ಕರೆ ಬಂದಿತ್ತು. ಅದನ್ನು ನಂಬಿದ ಆ ವ್ಯಕ್ತಿ ಸಾಲ ಪಡೆಯಲು ಮುಂದಾದರು. ಆಗ ಆಮಿಷವೊಡ್ಡಿದವರು ಮೂರು ತಿಂಗಳ ಇಎಂಐ ಮೊದಲೇ ನೀಡುವಂತೆ ಸೂಚಿಸಿದ್ದರು. ಅದರಂತೆ ಆ ವ್ಯಕ್ತಿ 1,70,000 ಹಣವನ್ನು ಅವರಿಗೆ ಕಳುಹಿಸಿದ್ದರು. ಆದರೆ ಆ ಬಳಿಕ ಅವರು ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಈ ಬಗ್ಗೆ ಬಂದ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ದೆಹಲಿಯಲ್ಲಿ ಕುಳಿತು ಈ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದ್ದು ದೆಹಲಿ ಪೊಲೀಸರ ಸಹಕಾರ ಪಡೆದು ಆರೋಪಿಯನ್ನು ಬಂಧಿಸಿಲಾಗಿದೆ ಎಂದರು.

ದೆಹಲಿಯ ಜನಕ್ ಪುರಿಯಲ್ಲಿ ಕಚೇರಿ ಹೊಂದಿದ್ದ ಯೂಸುಫ್ ಖಾನ್ (30) ಬಂಧಿತ ಆರೋಪಿ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿತರರಾದ ನೌಶದ್ ಮತ್ತು ಪ್ರಭಾಕರ್ ಎಂಬ ಇಬ್ಬರು ಪರಾರಿಯಾಗಿದ್ದಾರೆ. ಬಂಧಿತರಿಂದ 31 ಮೊಬೈಲ್, ಎರಡು ಲ್ಯಾಪ್ ಟಾಪ್, 70 ಸಾವಿರ ನಗದು ಮತ್ತು ಮೊಬೈಲ್ ಸಂಖ್ಯೆ ದಾಖಲಿಸಿರುವ ಹಲವು ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ತಂಡ ಕರ್ನಾಟಕದ 60 ಕ್ಕೂ ಅಧಿಕ ಮಂದಿಗೆ ಈ ರೀತಿ ವಂಚನೆ ಮಾಡಿರುವುದು ತಿಳಿದುಬಂದಿದೆ. ಆರೋಪಿಗಳು ಕಳೆದ ಆರು ತಿಂಗಳಿನಿಂದ ಈ ಕೃತ್ಯ ನಡೆಸುತ್ತಿದ್ದು ಸುಮಾರು 400 ಮಂದಿಗೆ ಕರೆ ಮಾಡಿ ಆಮಿಷವೊಡ್ಡಿದ್ದರು. ಇದರಲ್ಲಿ 60 ರಷ್ಟು ಮಂದಿ ಮೋಸ ಹೋಗಿದ್ದಾರೆ. ಇದರ ಬೆನ್ನಲ್ಲೇ ತನಿಖೆ ಮುಂದವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಈ ಜಾಲ ಪತ್ತೆ ಹಚ್ಚಿದ ಶ್ಯಾಮ್ ಸುಂದರ್ ಅವರ ತಂಡವನ್ನು ಅಭಿನಂದಿಸಿದರು.

ಮಂಗಳೂರು ಪೋಲಿಸರೊಂದಿಗೆ ವಶಪಡಿಸಿಕೊಂಡ ವಸ್ತುಗಳು

ABOUT THE AUTHOR

...view details