ಕರ್ನಾಟಕ

karnataka

ETV Bharat / state

ಯುವತಿಗೆ ಚುಡಾಯಿಸಿದ ಆರೋಪ: ಯುವಕರ ತಂಡದ ನಡುವೆ ಹೊಡೆದಾಟ - fight between two groups in mangalore

ಕದ್ರಿಯ ಬಟ್ಟಗುಡ್ಡೆಯಲ್ಲಿರುವ ರೆಸ್ಟೋರೆಂಟ್‌ವೊಂದಕ್ಕೆ ಯುವ ಜೋಡಿಯೊಂದು ಆಗಮಿಸಿತ್ತು. ಈ ಸಂದರ್ಭ ಯುವಕರ ತಂಡವೊಂದು ಯುವತಿಗೆ ಚುಡಾಯಿಸಿದ್ದರಿಂದ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ.

Kadri Police Station
ಕದ್ರಿ ಪೊಲೀಸ್​ ಠಾಣೆ

By

Published : Nov 4, 2021, 8:42 PM IST

ಮಂಗಳೂರು: ಯುವಕನೊಂದಿಗಿದ್ದ ಯುವತಿಯನ್ನು ಯುವಕರ ತಂಡವೊಂದು ಚುಡಾಯಿಸಿರುವ ಆರೋಪದ ಮೇಲೆ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿರುವ ಘಟನೆ ನಗರದಲ್ಲಿ ನಡೆದಿದೆ.

ಕದ್ರಿಯ ಬಟ್ಟಗುಡ್ಡೆಯಲ್ಲಿರುವ ರೆಸ್ಟೋರೆಂಟ್‌ವೊಂದಕ್ಕೆ ಯುವ ಜೋಡಿಯೊಂದು ಆಗಮಿಸಿತ್ತು. ಈ ವೇಳೆ ಯುವಕರ ತಂಡವೊಂದು ಯುವತಿಗೆ ಚುಡಾಯಿಸಿದೆ. ಆಗ ಯುವತಿ ಜೊತೆಗಿದ್ದ ಯುವಕ ತಗಾದೆ ತೆಗೆದಿದ್ದಾನೆ.

ಈ ಸಂದರ್ಭದಲ್ಲಿ ಯುವಕರ ತಂಡ ಹಾಗೂ ಯುವಕನ ನಡುವೆ ವಾಗ್ವಾದ ನಡೆದಿದೆ. ಅಷ್ಟಕ್ಕೆ ಸುಮ್ಮನಾಗದ ಯುವಕ ಫೋನ್ ಮಾಡಿ ತನ್ನ ಗೆಳೆಯರನ್ನು ಕರೆಸಿದ್ದಾನೆ. ಪರಿಣಾಮ ಇನ್ನಷ್ಟು ಯುವಕರು ಸ್ಥಳದಲ್ಲಿ ಜಮಾಯಿಸಿದ್ದಾರೆ. ನಂತರ ತಂಡಗಳ ನಡುವೆ ಹೊಡೆದಾಟ ನಡೆದಿದೆ. ಈ ವೇಳೆ ಕಲ್ಲಿನಿಂದ ಹಲ್ಲೆ ನಡೆಸಿರುವ ಹಿನ್ನೆಲೆ ಯುವಕನೊಬ್ಬನ ಹಣೆಗೆ ಗಾಯವಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಕದ್ರಿ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಆಗ ಯುವಕರ ತಂಡ ಸ್ಥಳದಿಂದ ಕಾಲ್ಕಿತ್ತಿದೆ. ನಂತರ ಸಿಬ್ಬಂದಿ, ಯುವತಿಯನ್ನು ವಿಚಾರಿಸಿ ಕಳುಹಿಸಿಕೊಟ್ಟಿದ್ದಾರೆ.

ಓದಿ:ನಾಲ್ಕು ಲಕ್ಷ ರೂಪಾಯಿಗೆ ನವಜಾತ ಶಿಶು ಮಾರಾಟ ಯತ್ನ: ವೈದ್ಯ, ಮೂವರು ಮಹಿಳೆಯರು ಸೆರೆ

ABOUT THE AUTHOR

...view details