ಕರ್ನಾಟಕ

karnataka

ETV Bharat / state

ಕಡಬ: ವಿಷ ಬೆರೆಸಿದ್ದ ಜ್ಯೂಸ್​ ಕುಡಿದು ಮಗನಿಗೂ ಕುಡಿಸಿದ ಕ್ರೂರ ತಂದೆ, ಮಗನ ಸ್ಥಿತಿ ಗಂಭೀರ - ವಿಷ ಬೆರೆಸಿದ್ದ ಜ್ಯೂಸ್​ ಕುಡಿದು ತಂದೆ-ಮಗ ಆಸ್ಪತ್ರೆಗೆ ದಾಖಲು

ಕಡಬದಲ್ಲಿ ತಂದೆಯೊಬ್ಬ ಜ್ಯೂಸ್​ನಲ್ಲಿ ವಿಷ ಬೆರಸಿ ಮಗನಿಗೆ ನೀಡಿ ತಾನು ಕುಡಿದು ಗಂಭೀರಗೊಂದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

Kadaba Police Station
ಕಡಬ ಪೊಲೀಸ್​ ಠಾಣೆ

By

Published : Oct 8, 2021, 5:33 PM IST

Updated : Oct 8, 2021, 5:50 PM IST

ಕಡಬ:ಸಂತಸದಿಂದ ಹತ್ತಿರ ಬಂದ ಮಕ್ಕಳಿಗೆ ತಂದೆ ವಿಷ ಬೆರೆಸಿದ ತಂಪು ಪಾನೀಯ ನೀಡಿ ಕೊಲ್ಲಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ.

ಈ ಪಾನೀಯ ಕುಡಿದ ಒಂದು ಮಗು ಗಂಭೀರಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆ ಪಾನೀಯ ನೀಡಿದ ಕ್ರೂರ ತಂದೆಯೂ ಸಹ ಅದನ್ನು ಸೇವಿಸಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಘಟನೆ?

ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಬಾಳೆಗುಂಡಿ ನಿವಾಸಿಯಾದ ವಿಶ್ವನಾಥ ಎಂಬುವವ ತನ್ನ ಮಕ್ಕಳಿಗೆ ವಿಷ ಬೆರೆಸಿದ ಜ್ಯೂಸ್ ನೀಡಿದ್ದಾನೆ ಎನ್ನಲಾಗಿದೆ. ವಿಶ್ವನಾಥ ಕುಡಿತದ ಚಟ ಮೈಗೂಡಿಸಿಕೊಂಡಿದ್ದ. ಕುಡಿದು ಬಂದು ಮನೆಯಲ್ಲಿ ನಿತ್ಯ ಜಗಳವಾಡುತ್ತಿದ್ದನಂತೆ. ಇದರಿಂದ ಮನನೊಂದ ಆತನ ಪತ್ನಿ ಕಡಬ ತಾಲೂಕಿನ ಬಲ್ಯ ಗ್ರಾಮದ ಗೋಣಿಗುಡ್ಡೆಯಲ್ಲಿರುವ ತನ್ನ ತವರು ಮನೆಗೆ ಹೋಗಿ ಇಬ್ಬರ ಮಕ್ಕಳೊಂದಿಗೆ ಜೀವನ ಮಾಡಲು ಮುಂದಾಗಿದ್ದಾರೆ.

ಎರಡು ದಿನಗಳ ಹಿಂದೆ ಈ ಗ್ರಾಮಕ್ಕೆ ಬಂದ ವಿಶ್ವನಾಥ, ಅಪ್ರಾಪ್ತ ಮಕ್ಕಳಿಗೆ ವಿಷ ಬೆರೆಸಿದ ಪಾನೀಯ ಕುಡಿಸಲು ಮುಂದಾಗಿದ್ದಾನೆ. ಓರ್ವ ಮಗ ಆ ವೇಳೆ ಜ್ಯೂಸ್ ಬೇಡವೆಂದು ನಿರಾಕರಿಸಿದ್ದಾನೆ. ಇನ್ನೋರ್ವ ಪಾನೀಯ ಕುಡಿದಿದ್ದು, ನಂತರದಲ್ಲಿ ವಾಂತಿ ಮಾಡಲು ಆರಂಭಿಸಿದ್ದಾನೆ. ಈ ಬಗ್ಗೆ ಪತ್ನಿ ಪ್ರಶ್ನಿಸಿದಾಗ ತಾನು ಜ್ಯೂಸ್‌ನಲ್ಲಿ ವಿಷ ಬೆರೆಸಿ ಮಗನಿಗೆ ಕುಡಿಸಿದ್ದೇನೆ, ಅಷ್ಟೇ ಅಲ್ಲದೇ ತಾನು ಕೂಡ ವಿಷ ಕುಡಿದಿದ್ದೇನೆ ಎಂದು ಹೇಳಿದ್ದಾನೆ.

ಕೂಡಲೇ ಪತ್ನಿ ಹಾಗೂ ಸ್ಥಳೀಯರು ಸೇರಿ ಮಗುವನ್ನು ಮತ್ತು ವಿಶ್ವನಾಥನನ್ನು ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Oct 8, 2021, 5:50 PM IST

ABOUT THE AUTHOR

...view details