ಮಂಗಳೂರು:ಮುಸ್ಲಿಂ ಸಂವೇದನೆಯ ಕಥೆಗಾರ, ಕನ್ನಡ ಮತ್ತು ಬ್ಯಾರಿ ಕಥಾ ಜಗತ್ತನ್ನು ಶ್ರೀಮಂತಗೊಳಿಸಿದ ಹಿರಿಯ ಸಾಹಿತಿ ಫಕ್ರುದ್ದೀನ್ ಇರುವೈಲ್ ಅವರು ಅನಾರೋಗ್ಯದಿಂದ ನಿಧನರಾದ್ದಾರೆ.
ಮುಸ್ಲಿಂ ಸಂವೇದನೆಯ ಕಥೆಗಾರ ಫಕ್ರುದ್ದೀನ್ ಇರುವೈಲ್ ಇನ್ನಿಲ್ಲ - Mangalore latest news
ಮುಸ್ಲಿಂ ಸಂವೇದನೆಯ ಕಥೆಗಾರ, ಕನ್ನಡ ಮತ್ತು ಬ್ಯಾರಿ ಕಥಾ ಜಗತ್ತನ್ನು ಶ್ರೀಮಂತಗೊಳಿಸಿದ ಹಿರಿಯ ಸಾಹಿತಿ ಫಕ್ರುದ್ದೀನ್ ಇರುವೈಲ್ ಅನಾರೋಗ್ಯದಿಂದ ನಿಧನರಾದ್ದಾರೆ.
ವೃತ್ತಿಯಲ್ಲಿ ಸಣ್ಣ ಸಿವಿಲ್ ಗುತ್ತಿಗೆದಾರರಾಗಿರುವ ಫಕ್ರುದ್ದೀನ್ ಇರುವೈಲು, 1985ರಿಂದೀಚೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದವರು. ಫಕೀರ್ ಮಹಮ್ಮದ್ ಕಟ್ಪಾಡಿ, ಬೊಳುವಾರು ಮಹಮ್ಮದ್ ಕುಂಞಿಯವರ ಬಳಿಕ ಫಕ್ರುದ್ದೀನ್ ಅವರು ಕನ್ನಡ ಕಥಾ ಜಗತ್ತಿನಲ್ಲಿ ಬ್ಯಾರಿ ಸಂವೇದನೆಯನ್ನು ದಟ್ಟವಾಗಿ ತಂದಿರುವ ಸಾಹಿತಿಯಾಗಿದ್ದಾರೆ.
ಮೂಡುಬಿದಿರೆ ತಾಲೂಕಿನ ಇರುವೈಲ್ ಎಂಬ ಪುಟ್ಟ ಗ್ರಾಮದ ಪೂವಣಿಬೆಟ್ಟು ಎಂಬ ಹಳ್ಳಿಯಲ್ಲಿ ವಾಸವಾಗಿದ್ದ ಫಕ್ರುದ್ದೀನ್ ಇರುವೈಲು ಅವರ, ಮೊದಲ ಕಥಾ ಸಂಕಲನ 'ಎಲ್ಲಿರುವೆ ನನ್ನ ಕಂದಾ' 2001ರಲ್ಲಿ ನಡೆದ ಹನ್ನೆರಡನೇ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತ್ತು. ಆ ಬಳಿಕ ಅವರು 'ಅಲೀಮಾ ಅಕ್ಷರ ಕಲಿತದ್ದು', 'ಅನಿರೀಕ್ಷಿತ', 'ನಾದಿರಾ', 'ಅವಸಾನ', 'ನೊಂಬಲ'.. ಹೀಗೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2001ರಲ್ಲಿ ಅಲೀಮಾ ಅಕ್ಷರ ಕಲಿತದ್ದು ಕೃತಿಗೆ ಪ್ರತಿಷ್ಠಿತ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ದೊರಕಿತ್ತು.