ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡ ಡಿಸಿ ಹೆಸರಿನಲ್ಲಿ ವಾಟ್ಸ್​ಆ್ಯಪ್​  ಸೃಷ್ಟಿ- ಜಾಗರೂಕರಾಗಿರಲು ಮನವಿ - ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರ ಹೆಸರಿನಲ್ಲಿ ಖದೀಮರು ವಾಟ್ಸ್​ಆ್ಯಪ್​​ ಖಾತೆಯನ್ನು ಸೃಷ್ಟಿಸಿದ್ದಾರೆ.

ದ ಕ ಜಿಲ್ಲಾಧಿಕಾರಿ ಹೆಸರಿನಲ್ಲಿ ವಾಟ್ಸಪ್ ಸೃಷ್ಟಿ
ದ ಕ ಜಿಲ್ಲಾಧಿಕಾರಿ ಹೆಸರಿನಲ್ಲಿ ವಾಟ್ಸಪ್ ಸೃಷ್ಟಿ

By

Published : Sep 14, 2022, 9:51 PM IST

ಮಂಗಳೂರು: ಫೇಸ್ ಬುಕ್​ನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ವಂಚನೆ ಮಾಡುತ್ತಿದ್ದ ಪ್ರಕರಣಗಳು ನಡೆಯುತ್ತಿರುವ ನಡುವೆ ನಕಲಿ ವಾಟ್ಸ್​​ಆ್ಯಪ್​​ ಖಾತೆ ಸೃಷ್ಟಿಸಿ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ದ ಕ ಜಿಲ್ಲಾಧಿಕಾರಿ ಹೆಸರಿನಲ್ಲಿ ವಾಟ್ಸಪ್ ಸೃಷ್ಟಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರ ಹೆಸರಿನಲ್ಲಿ ಖದೀಮರು ವಾಟ್ಸ್​​ಆ್ಯಪ್​​ ಖಾತೆಯನ್ನು ಸೃಷ್ಟಿಸಿದ್ದಾರೆ. 8590710748 ನಂಬರ್​ನಿಂದ ದ. ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಅವರ ಹೆಸರು ಮತ್ತು ಫೋಟೋ ಬಳಸಿ‌ ಖಾತೆ ಸೃಷ್ಟಿಸಲಾಗಿದೆ.

ವಾಟ್ಸ್​ಆ್ಯಪ್​ ಮುಖಾಂತರ ಮೆಸೇಜ್​ ಕಳುಹಿಸಿ ಅಪರಿಚಿತರು ಸಹಾಯ ಅಥವಾ ಹಣವನ್ನು ವರ್ಗಾಯಿಸಲು ಕೇಳಬಹುದು. ಈ ನಂಬರ್ ನನ್ನದಾಗಿರುವುದಿಲ್ಲ. ಆದ ಕಾರಣ ನೀವು ಯಾವುದೇ ರೀತಿಯಲ್ಲಿ ಇವರಿಗೆ ಸಹಾಯ ಅಥವಾ ಹಣ ವರ್ಗಾಯಿಸಬೇಡಿ. ಆ ನಂಬರ್ ವಾಟ್ಸ್​ಆ್ಯಪ್​​ನಲ್ಲಿ ರಿಪೋರ್ಟ್ ಮಾಡಿ ಬ್ಲಾಕ್ ಮಾಡಿ ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೆನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.

ಓದಿ:ಕೆರೆಗಳನ್ನು ಮುಚ್ಚಿದ್ದರಿಂದಲೇ ನೆರೆ ಸ್ಥಿತಿ ಎದುರಾಗಿದೆ: ಕಂದಾಯ ಸಚಿವ ಆರ್ ಅಶೋಕ್

ABOUT THE AUTHOR

...view details