ಮಂಗಳೂರು: ಬೀದಿ ನಾಯಿಯೊಂದು ಜ್ಯೂಸ್ಗಳಿಗೆ ಬಳಸುವ ಮಂಜುಗಡ್ಡೆಯನ್ನು ನೆಕ್ಕುವ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಇದು ಕದ್ರಿ ಪಾರ್ಕ್ ಬಳಿಯ ದೃಶ್ಯ ಎಂದು ಅಲ್ಲಿಯ ಜ್ಯೂಸ್ ಸೆಂಟರ್ ಮಾಲೀಕರ ತೇಜೋವಧೆ ಮಾಡಲಾಗುತ್ತಿದೆ. ಈ ಮೂಲಕ ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ಕೊಳ್ಳಿ ಇಡುವಂತಹ ಕೆಲಸ ಮಾಡಲಾಗುತ್ತಿದೆ ಎಂದು ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಆರೋಪಿಸಿದರು.
ವಿಡಿಯೋ ಹರಿಬಿಟ್ಟು ಕದ್ರಿ ಪಾರ್ಕ್ ಜ್ಯೂಸ್ ಸೆಂಟರ್ ಮಾಲೀಕರ ತೇಜೋವಧೆ : ಕಾನೂನು ಕ್ರಮಕ್ಕೆ ಆಗ್ರಹ - mangalore news
ಬೀದಿ ನಾಯಿಯೊಂದು ಜ್ಯೂಸ್ಗಳಿಗೆ ಬಳಸುವ ಮಂಜುಗಡ್ಡೆಯನ್ನು ನೆಕ್ಕುವ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಇದು ಕದ್ರಿ ಪಾರ್ಕ್ ಬಳಿಯ ದೃಶ್ಯ ಎಂದು ಅಲ್ಲಿಯ ಜ್ಯೂಸ್ ಸೆಂಟರ್ ಮಾಲೀಕರ ತೇಜೋವಧೆ ಮಾಡಲಾಗುತ್ತಿದೆ ಎಂದು ಸಂಘಟನೆಯ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
fake-video-of-dealer-of-kadri-park-juice-center-at-magalore
ಮಂಗಳೂರು ಮನಪಾ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಇದು ಕದ್ರಿಪಾರ್ಕ್ ಬಳಿ ಇರುವ ಜ್ಯೂಸ್ ಸೆಂಟರ್ಗಳಲ್ಲಿರುವ ದೃಶ್ಯ ಅಲ್ಲ ಎಂದು ಖಚಿತಪಡಿಸಿದ್ದಾರೆ. ಆದರೂ ಈ ಬಗ್ಗೆ ಜಾಲತಾಣಗಳಲ್ಲಿ ಸುಳ್ಳು ದೃಶ್ಯಾವಳಿಗಳನ್ನು ಹರಿ ಬಿಟ್ಟು ವ್ಯಾಪಾರಿಗಳ ತೇಜೋವಧೆ ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಈ ರೀತಿಯಲ್ಲಿ ಸುಳ್ಳು ವೀಡಿಯೋಗಳನ್ನು ವೈರಲ್ ಮಾಡಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.