ಮಂಗಳೂರು: ದಂಪತಿ ಮೃತದೇಹ ತೇಲುತ್ತಿರುವ ಕಿರುಚಿತ್ರದ ವಿಡಿಯೋವನ್ನು ಯಾರೋ ಕಿಡಿಗೇಡಿಗಳು ತಿರುಚಿ ನೇತ್ರಾವತಿ ನದಿಯಲ್ಲಿ ದಂಪತಿ ಮೃತದೇಹ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ದಂಪತಿ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ.. ಕಿಡಿಗೇಡಿಗಳಿಂದ ನಕಲಿ ವಿಡಿಯೋ ವೈರಲ್.. - Netravati River
ಅಡ್ಯಾರ್ ಬಳಿಯಿರುವ ನೇತ್ರಾವತಿ ನದಿ ತಟದಲ್ಲಿ ಕಿರುಚಿತ್ರವೊಂದರ ಚಿತ್ರೀಕರಣ ನಡೆಯುತ್ತಿತ್ತು. ಇದರಲ್ಲಿ ದಂಪತಿ ಒಟ್ಟಿಗೆ ಬಟ್ಟೆಯಿಂದ ಕಟ್ಟಿಕೊಂಡು ಮೃತಪಟ್ಟು, ಮೃತದೇಹ ನದಿಯಲ್ಲಿ ತೇಲುವ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು..
![ದಂಪತಿ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ.. ಕಿಡಿಗೇಡಿಗಳಿಂದ ನಕಲಿ ವಿಡಿಯೋ ವೈರಲ್.. ds](https://etvbharatimages.akamaized.net/etvbharat/prod-images/768-512-10441293-thumbnail-3x2-vish.jpg)
ಕಿಡಿಗೇಡಿಗಳಿಂದ ನಕಲಿ ವೀಡಿಯೋ ವೈರಲ್
ಕಿಡಿಗೇಡಿಗಳಿಂದ ನಕಲಿ ವೀಡಿಯೋ ವೈರಲ್
ನಗರದ ಅಡ್ಯಾರ್ ಬಳಿಯಿರುವ ನೇತ್ರಾವತಿ ನದಿ ತಟದಲ್ಲಿ ಕಿರುಚಿತ್ರವೊಂದರ ಚಿತ್ರೀಕರಣ ನಡೆಯುತ್ತಿತ್ತು. ಇದರಲ್ಲಿ ದಂಪತಿ ಒಟ್ಟಿಗೆ ಬಟ್ಟೆಯಿಂದ ಕಟ್ಟಿಕೊಂಡು ಮೃತಪಟ್ಟು, ಮೃತದೇಹ ನದಿಯಲ್ಲಿ ತೇಲುವ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು.
ಇದರ 17 ಸೆಕೆಂಡುಗಳ ವಿಡಿಯೋ ತುಣುಕು ಈಗ ಸಖತ್ ವೈರಲ್ ಆಗಿದೆ. ಈಗ ಸ್ಥಳೀಯರು ಹಾಗೂ ವಿದೇಶದಲ್ಲಿನ ಕನ್ನಡಿಗರೂ ಇದರಿಂದ ಆತಂಕಗೊಂಡು ತಮ್ಮ ಪರಿಚಯದವರಿಗೆ ಕರೆ ಮಾಡಿ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.