ಮಂಗಳೂರು:ಮಾಜಿ ಸಚಿವ ಅಭಯಚಂದ್ರ ಜೈನ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಯಾಗಿದ್ದು, ಇದನ್ನು ಸ್ವತಃ ಅಭಯಚಂದ್ರ ಜೈನ್ ತಮ್ಮ ಅಧಿಕೃತ ಎಫ್ಬಿ ಖಾತೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.
ಅಭಯಚಂದ್ರ ಜೈನ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ
ಅಭಯಚಂದ್ರ ಜೈನ್ ಹೆಸರಲ್ಲಿ ಫೇಸ್ಬುಕ್ ಖಾತೆ ತೆರೆಯಲಾಗಿದ್ದು, ಈ ಬಗ್ಗೆ ಮಾಜಿ ಸಚಿವರೇ ಸ್ಪಷ್ಟನೆ ನೀಡಿ ಫ್ರೆಂಡ್ ರಿಕ್ವೆಸ್ಟ್ ಬಂದರೆ ಸ್ವೀಕರಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಅಭಯಚಂದ್ರ ಜೈನ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ
ತಮ್ಮ ಹೆಸರಿನ ಎಫ್ಬಿ ಖಾತೆಯ ಮೂಲಕ ಫೇಸ್ಬುಕ್ ಖಾತೆ ತೆರೆಯಲಾಗಿದೆ. ದಯವಿಟ್ಟು ಆ ಖಾತೆಯಿಂದ ಯಾರಿಗಾದರೂ ಫ್ರೆಂಡ್ ರಿಕ್ವೆಸ್ಟ್ ಬಂದರೆ ಸ್ವೀಕರಿಸಬೇಡಿ. ಶೇರ್ ಮಾಡಿರುವ ಲಿಂಕ್ ಉಪಯೋಗಿಸಿ ನಕಲಿ ಫೇಸ್ಬುಕ್ ಖಾತೆಯನ್ನು ಎಲ್ಲರೂ ರಿಪೋರ್ಟ್ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.
ಇತ್ತೀಚೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹೆಸರಿನಲ್ಲಿಯೂ ನಕಲಿ ಎಫ್ಬಿ ಖಾತೆ ತೆರೆಯಲಾಗಿತ್ತು. ಈ ಬಗ್ಗೆ ಎಚ್ಚರದಿಂದಿರಿ ಎಂದು ಸ್ವತಃ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರು.