ಕರ್ನಾಟಕ

karnataka

ETV Bharat / state

ಪುತ್ತೂರು ತಹಶೀಲ್ದಾರ್​ಗೆ ನಕಲಿ ಫೇಸ್ಬುಕ್ ಕಾಟ.. ಸೈಬರ್ ಕ್ರೈಮ್​ಗೆ ದೂರು.. - ಪುತ್ತೂರು ತಹಶೀಲ್ದಾರ್​ ಹೆಸರಲ್ಲಿ ನಕಲಿ ಫೇಸ್ಬುಕ್​ ಖಾತೆ,

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಹಶೀಲ್ದಾರ್​ಗೆ ನಕಲಿ ಫೇಸ್ಬುಕ್ ಅಕೌಂಟ್​ನ ಕಾಟ ಶುರುವಾಗಿದ್ದು, ಸೈಬರ್ ಕ್ರೈಮ್​ಗೆ ದೂರು ನೀಡಿದ್ದಾರೆ..

Fake Facebook account create, Fake Facebook account create in Puttur Tahsildar, Fake Facebook account, Fake Facebook account news, ನಕಲಿ ಫೇಸ್ಬುಕ್ ಖಾತೆ, ನಕಲಿ ಫೇಸ್ಬುಕ್​ ಖಾತೆ ರಚನೆ, ಪುತ್ತೂರು ತಹಶೀಲ್ದಾರ್​ ಹೆಸರಲ್ಲಿ ನಕಲಿ ಫೇಸ್ಬುಕ್​ ಖಾತೆ,  ನಕಲಿ ಫೇಸ್ಬುಕ್​ ಖಾತೆ ಸುದ್ದಿ,
ಪುತ್ತೂರು ತಹಶೀಲ್ದಾರ್​ಗೆ ನಕಲಿ ಫೇಸ್ಬುಕ್ ಕಾಟ

By

Published : May 28, 2021, 2:13 PM IST

ಪುತ್ತೂರು : ಪುತ್ತೂರು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಆಗಿರುವ ತಹಶೀಲ್ದಾರ್ ಟಿ.ರಮೇಶ್ ಬಾಬುರವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಗುರುವಾರ ಮಂಗಳೂರು ಸೈಬರ್ ಕ್ರೈಮ್​ಗೆ ದೂರು ನೀಡಿದ್ದಾರೆ.

ಪುತ್ತೂರು ತಹಶೀಲ್ದಾರ್​ಗೆ ನಕಲಿ ಫೇಸ್ಬುಕ್ ಕಾಟ

ತಹಶೀಲ್ದಾರ್ ರಮೇಶ್ ಬಾಬುರವರ ಹೆಸರಿನಲ್ಲಿ ಇತ್ತೀಚೆಗೆ ಯಾರೋ ಫೇಸ್ಬುಕ್ ಖಾತೆ ತೆರೆದಿದ್ದು, ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ.

ರಿಕ್ವೆಸ್ಟ್ ಒಪ್ಪಿದ ಗ್ರಾಮಕರಣಿಕರು, ಸಾಮಾಜಿಕ ಕಾರ್ಯಕರ್ತರು ಸಹಿತ ಹಲವರಿಗೆ ಇದೇ ಫೇಸ್ಬುಕ್ ಅಕೌಂಟಿನಿಂದ ಸಂದೇಶ‌ ಕಳುಹಿಸಿ ತುರ್ತಾಗಿ ಹಣ ಬೇಕಿರುವುದರಿಂದ ತಕ್ಷಣ ಗೂಗಲ್ ಪೇ ಮಾಡುವಂತೆ ಕೇಳಲಾಗಿದೆ.

ಪುತ್ತೂರು ತಹಶೀಲ್ದಾರ್​ಗೆ ನಕಲಿ ಫೇಸ್ಬುಕ್ ಕಾಟ

ಈ ಮಾಹಿತಿ ತಿಳಿದ ತಹಶೀಲ್ದಾರರು ತನ್ನ ಹೆಸರಿನಲ್ಲಿ ಯಾರೋ ನಕಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಡಿರುವ ಬಗ್ಗೆ ಸೈಬರ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details