ಕರ್ನಾಟಕ

karnataka

ETV Bharat / state

ಸೇತುವೆ ಮೇಲೆ ಜನ ಸೇರಿದ್ದೇ ತಪ್ಪಾಯ್ತ.. ನದಿಗೆ ವ್ಯಕ್ತಿ ಹಾರಿದ್ದಾನೆಂಬ ಕಥೆ ಕಟ್ಟಿದರೇ? - Fake death news of ullala

ನಿನ್ನೆ ವ್ಯಕ್ತಿಯೋರ್ವನು ಸೇತುವೆ ಮೇಲೆ ತನ್ನ ಕೊಡೆ ಇಟ್ಟು ನದಿಗೆ ಹಾರಿದ್ದಾನೆ ಎಂಬ ಸುದ್ದಿ ಹರಡಿತ್ತು. ಆದ್ರೆ ಅಲ್ಲಿ ನಡೆದದ್ದೇ ಬೇರೆ, ಸೇತುವೆ ಮೇಲೆ ಜನ ಸೇರಿರುವುದನ್ನು ಕಂಡ ದಾರಿಹೋಕರು ಸುಳ್ಳು ಸುದ್ದಿ ಹರಡಿಸಿದ್ದಾರೆ.

Fake death news spread in ullala
Fake death news spread in ullala

By

Published : Jul 5, 2020, 5:39 PM IST

ಉಳ್ಳಾಲ:ಸೇತುವೆ ಮೇಲೆ ಜನ ಸೇರಿರುವುದನ್ನು ತಪ್ಪಾಗಿ ಭಾವಿಸಿದ ದಾರಿಹೋಕರು, 'ಕೊಡೆಯಿಟ್ಟು ಸೇತುವೆಯಿಂದ ವ್ಯಕ್ತಿ ಹಾರಿದ್ದಾನೆ' ಎಂಬ ಸುದ್ದಿಯನ್ನು ಹರಿಯಬಿಟ್ಟಿದ್ದಾರೆ.

ನೇತ್ರಾವತಿ ಸೇತುವೆಯಲ್ಲಿ ಸರಣಿಯಾಗಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದ್ದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ, ಮಂಗಳೂರು ಉತ್ತರ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಭರವಸೆ ನೀಡಿದಂತೆ ಶನಿವಾರ ಸೇತುವೆಗೆ ತಡೆಬೇಲಿ ಹಾಕುವ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಸೇತುವೆ ಮೇಲೆ ಜನ ಸೇರಿರುವುದನ್ನು ತಪ್ಪಾಗಿ ಭಾವಿಸಿದ ದಾರಿಹೋಕರು 'ಕೊಡೆಯಿಟ್ಟು ಸೇತುವೆಯಿಂದ ವ್ಯಕ್ತಿ ಹಾರಿದ್ದಾನೆ' ಎಂಬ ಸುದ್ದಿಯನ್ನೇ ಹರಿಯಬಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿದರೂ, ಸಂಬಂಧಿಸಿದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಾಹಿತಿ ಇಲ್ಲ. ಶನಿವಾರ ತಡರಾತ್ರಿವರೆಗೂ ಠಾಣಾ ಪೊಲೀಸರಿಗಾಗಲಿ, ಸಂಚಾರಿ ಠಾಣಾ ಪೊಲೀಸರಿಗಾಗಲಿ ಈ ಕುರಿತು ಮಾಹಿತಿಯೇ ಲಭ್ಯವಿಲ್ಲ.

ಕೂಲಂಕುಷವಾಗಿ ಪೊಲೀಸರು ಪರಿಶೀಲಿಸಿದಾಗ ಸೇತುವೆಯಲ್ಲಿ ಶಾಸಕರ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿರುವುದು ತಿಳಿದುಬಂದಿದೆ. ನದಿಗೆ ವ್ಯಕ್ತಿ ಹಾರಿದ್ದಾನೆ ಎಂಬುವುದು ಸುಳ್ಳು ಸುದ್ದಿ ಎಂದು ಪೊಲೀಸರು ತಿಳಿಸಿದ್ದಾರೆ. ಮಜಾ ಪಡೆಯಲೆಂದೇ ಈ ಸುದ್ದಿ ಹರಡಿಸಿದ್ದಾರೆಯೇ ಅಥವಾ ಜನ ಸೇರಿರುವುದನ್ನು ಕಂಡು ಈ ರೀತಿಯಾಗಿ ವರ್ತಿಸಿದರೇ ಎನ್ನುವುದು ತಿಳಿದು ಬರಬೇಕಿದೆ.

ABOUT THE AUTHOR

...view details