ಕರ್ನಾಟಕ

karnataka

ETV Bharat / state

FB​​ ಜಾಹಿರಾತು ನಂಬಿ ಮೋಸ ಹೋದ ವ್ಯಕ್ತಿ; ಕಳೆದುಕೊಂಡ ಹಣವೆಷ್ಟು ಗೊತ್ತೇ? - undefined

ಫೇಸ್‌ಬುಕ್‌ನಲ್ಲಿ ಕಾರು ಮಾರಾಟದ ಜಾಹೀರಾತು ಸಂದೇಶ ನಂಬಿ ಮಂಗಳೂರಿನ ವ್ಯಕ್ತಿ ಲಕ್ಷ ಲಕ್ಷ ಹಣ ಕಳೆದುಕೊಂಡು ಈಗ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾರೆ.

ಫೇಸ್​​ಬುಕ್​​ ಜಾಹಿರಾತು ನಂಬಿ ಮೋಸ ಹೋದ ವ್ಯಕ್ತಿ

By

Published : Jul 21, 2019, 3:31 PM IST

ಮಂಗಳೂರು: ಫೇಸ್‌ಬುಕ್‌ನಲ್ಲಿ ಕಾರು ಮಾರಾಟದ ಜಾಹಿರಾತು ನಂಬಿ 1,20,000 ರೂ. ನೀಡಿದ ವ್ಯಕ್ತಿಯೋರ್ವರು ಮೋಸ ಹೋದ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೇಸ್‌ಬುಕ್‌ನಲ್ಲಿ ಕಾರು ಮಾರಾಟದ ಜಾಹೀರಾತು ನೋಡಿ ಮಂಗಳೂರಿನ ವ್ಯಕ್ತಿಯೋರ್ವರು ಅದನ್ನು ಕೊಳ್ಳುವ ಬಗ್ಗೆ ಸಂದೇಶ ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಮೀನಾಕ್ಷಿದಾಸ್ ಎಂಬ ವ್ಯಕ್ತಿ ಕರೆ ಮಾಡಿ, ತಾನು ಸಿಐಎಸ್ಎಫ್ ಸಿಬ್ಬಂದಿಯಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಉದ್ಯೋಗಿಯಾಗಿದ್ದೇನೆ. ತನಗೀಗ ಕಾಶ್ಮೀರಕ್ಕೆ ವರ್ಗಾವಣೆಯಾಗಿದೆ. ತನ್ನ ಆಲ್ಟೋ 800 ಕಾರನ್ನು ಮಾರಾಟ ಮಾಡುವುದಾಗಿ ಕಾರಿನ ಆರ್ ಸಿ ಹಾಗೂ ಗುರುತಿನ ಚೀಟಿಯನ್ನು ವಾಟ್ಸ್‌ಅಪ್ ಮೂಲಕ ಕಳುಹಿಸಿಕೊಟ್ಟಿದ್ದಾರೆ.

ಇದನ್ನು ನಂಬಿ ಹಂತ ಹಂತವಾಗಿ 1,20,000 ರೂ.ವನ್ನು ಆತನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಆದರೆ ಆ ಬಳಿಕ ವ್ಯಕ್ತಿಯ ಪತ್ತೆ ಇಲ್ಲ ಎಂದು ಸೈಬರ್ ಠಾಣೆಗೆ ಮೋಸ ಹೋದ ವ್ಯಕ್ತಿ ದೂರು ನೀಡಿದ್ದಾರೆ. ಈ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details