ಮಂಗಳೂರು:ವಿಶೇಷ ವಿಮಾನದಲ್ಲಿ ಊರಿಗೆ ಬಂದ ಅನಿವಾಸಿ ಭಾರತೀಯರಿಗೆ ಕ್ವಾರಂಟೈನ್ನಲ್ಲಿರಲು ನಿಗದಿಪಡಿಸಿದ ಹೋಟೆಲ್ ಮತ್ತು ಹಾಸ್ಟೆಲ್ಗಳಿಗೆ ದುಬಾರಿ ಬಾಡಿಗೆ ನಿಗದಿಪಡಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಯುಎಇಯಿಂದ ಬಂದವರು ಹೋಟೆಲ್ ಕ್ವಾರಂಟೈನ್ಗೆ ಕೊಡಬೇಕಾದ ಬಾಡಿಗೆ ಎಷ್ಟು ಗೊತ್ತಾ? - expensive rent for a quarantine center for NRI
ಜಿಲ್ಲಾಡಳಿತ ಕ್ವಾರಂಟೈನ್ಗಾಗಿ 17 ಹೋಟೆಲ್ಗಳು ಮತ್ತು 12 ಹಾಸ್ಟೆಲ್ ವ್ಯವಸ್ಥೆ ಮಾಡಿದೆ. ಆದರೆ, ಈ ಕ್ವಾರಂಟೈನ್ ಕೇಂದ್ರಕ್ಕೆ ದಿನಕ್ಕೆ 1 ಸಾವಿರದಿಂದ 4,500 ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಇದರಿಂದಾಗಿ ಅನಿವಾಸಿ ಭಾರತೀಯರು 14 ದಿನಗಳ ಕ್ವಾರಂಟೈನ್ಗೆ ಕನಿಷ್ಠ 14 ಸಾವಿರ ರೂ. ವ್ಯಯಿಸಬೇಕಾಗುತ್ತದೆ.
ಯುಎಇಯಲ್ಲಿ ಸಿಲುಕಿಕೊಂಡಿದ್ದ ಅನಿವಾಸಿ ಭಾರತೀಯರು ವಿಶೇಷ ವಿಮಾನದಲ್ಲಿ ನಿನ್ನೆ ಮಂಗಳೂರಿಗೆ ಬಂದಿಳಿದಿದ್ದಾರೆ. ಹೀಗೆ ಬಂದವರು ಮನೆಗೆ ಹೋಗದೆ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿರಬೇಕಾಗುತ್ತದೆ. ಜಿಲ್ಲಾಡಳಿತ ಇದಕ್ಕಾಗಿ 17 ಹೋಟೆಲ್ಗಳು ಮತ್ತು 12 ಹಾಸ್ಟೆಲ್ ವ್ಯವಸ್ಥೆ ಮಾಡಿದೆ. ಆದರೆ, ಈ ಕ್ವಾರಂಟೈನ್ ಕೇಂದ್ರಕ್ಕೆ ದಿನಕ್ಕೆ 1 ಸಾವಿರದಿಂದ 4,500 ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಇದರಿಂದಾಗಿ ಅನಿವಾಸಿ ಭಾರತೀಯರು 14 ದಿನಗಳ ಕ್ವಾರಂಟೈನ್ಗೆ ಕನಿಷ್ಠ 14 ಸಾವಿರ ರೂ. ವ್ಯಯಿಸಬೇಕಾಗುತ್ತದೆ.
ಜಿಲ್ಲಾಡಳಿತ ಈ ಕ್ರಮದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಮೊದಲೇ ಸಂಕಷ್ಟಲ್ಲಿರುವವರಿಗೆ ದುಬಾರಿ ವೆಚ್ಚ ವಿಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.