ಮಂಗಳೂರು : ಇಲ್ಲಿನ ಅಲೋಶಿಯಸ್ ಕಾಲೇಜಿನಲ್ಲಿರುವ ಮ್ಯೂಸಿಯಂನಲ್ಲಿ ಈವರೆಗೆ ಪುರಾತನ ವಸ್ತುಗಳನ್ನು ಸಂಗ್ರಹಿಸಲಾಗುತ್ತಿತ್ತು. ಇದೀಗ ವಿವಿಧ ದೇಶಗಳ ನಾಣ್ಯಗಳನ್ನು ಸಂಗ್ರಹ ಮಾಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಅಲೋಶಿಯಮ್ ಮ್ಯೂಸಿಯಂನಲ್ಲಿ ವಿಶ್ವದ 82 ದೇಶಗಳ ನಾಣ್ಯಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಈ ನಾಣ್ಯಗಳು ಆಯಾ ಕಾಲದ ಇತಿಹಾಸವನ್ನು ಹೇಳಿತ್ತಿವೆ. ಇಲ್ಲಿ ಸುಮಾರು 4000 ನಾಣ್ಯಗಳ ಸಂಗ್ರಹವಿದ್ದು, 5 ವಿಭಾಗಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಏಷ್ಯಾಖಂಡದ 35 ದೇಶಗಳ 318 ನಾಣ್ಯಗಳು, ಅಮೆರಿಕಾ ವಲಯದ 6 ದೇಶಗಳ 63 ನಾಣ್ಯಗಳು,ಆಫ್ರಿಕಾ ಖಂಡದ 7 ದೇಶಗಳ 71 ನಾಣ್ಯಗಳು, ಯೂರೋಪ್ ಖಂಡದ 27 ದೇಶಗಳ 575 ನಾಣ್ಯ, ಓಷಿಯಾನಿಯಾದ 3 ದೇಶಗಳ 9 ನಾಣ್ಯ ಅಲೋಶಿಯಸ್ ಮ್ಯೂಸಿಯಂನ ಸಂಗ್ರಹದಲ್ಲಿವೆ.