ಕರ್ನಾಟಕ

karnataka

By

Published : Apr 18, 2020, 7:31 PM IST

ETV Bharat / state

ಬಂಟ್ವಾಳದಲ್ಲಿ ಮನೆ ಹಿಂದೆ ಕಳ್ಳಭಟ್ಟಿ ತಯಾರಿ: ಅಬಕಾರಿ ಅಧಿಕಾರಿಗಳಿಂದ ದಾಳಿ

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಎಂಬಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಮಂಗಳೂರು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಇಬ್ಬರನ್ನು ದಸ್ತಗಿರಿ ಮಾಡಿದ್ದಾರೆ.

excise officer Attack at Bantwal
ಲಾಕ್​ಡೌನ್ ಮಧ್ಯೆ ಕಳ್ಳಭಟ್ಟಿ ತಯಾರಿ: ಅಬಕಾರಿ ಅಧಿಕಾರಿಗಳ ದಾಳಿ

ಬಂಟ್ವಾಳ: ಅಬಕಾರಿ ಇಲಾಖೆ ಅಧಿಕಾರಿಗಳು ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಎಂಬಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.

ಅಬಕಾರಿ ಅಧಿಕಾರಿಗಳ ದಾಳಿ

ಅಬಕಾರಿ ಜಂಟಿ ಆಯುಕ್ತರಾದ ಶೈಲಜಾ ಕೋಟೆ ನಿರ್ದೇಶನದಂತೆ ಅಬಕಾರಿ ಅಧೀಕ್ಷಕ ವಿನೋದ್ ಕುಮಾರ್ ನೇತೃತ್ವದಲ್ಲಿ ಬಂಟ್ವಾಳ ಉಪ ವಿಭಾಗದ ಉಪ ಅಧೀಕ್ಷಕರಾದ ಗೀತಾ ಮಾಗದರ್ಶನದಂತೆ ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕ ವಿಜಯ್ ಕುಮಾರ್, ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಲಾಗಿದೆ.

ಈ ವೇಳೆ ಕ್ರಿಸ್ಟನ್ ಡಿಸೋಜಾ ಎಂಬುವರ ಮನೆಯ ಹಿಂಭಾಗದಲ್ಲಿ 1,200 ಲೀಟರ್ ಬೆಲ್ಲದ ಕೊಳೆ ಮತ್ತು ಕಳ್ಳಭಟ್ಟಿ ತಯಾರಿಸುವ ಸಾಮಗ್ರಿ, 950 ಕೆಜಿ ಬೆಲ್ಲ ಮತ್ತು 500 ಲೀಟರ್ ನಕಲಿ ವೈನ್, 300 ಲೀಟರ್ ಬಟಾಟೆ ಮಿಶ್ರಣದ ಬೆಲ್ಲದ ಕೊಳೆಯನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳಾದ ಕಿರಣ್ ಕುಮಾರ್ ಮತ್ತು ಕ್ರಿಸ್ಟನ್ ಡಿಸೋಜಾ ಎಂಬುವರನ್ನು ದಸ್ತಗಿರಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ABOUT THE AUTHOR

...view details