ಮಂಗಳೂರು :ಸಿದ್ದಾರ್ಥ್ ಒಬ್ಬ ಸರಳ ಹಾಗೂ ಸ್ನೇಹ ಜೀವಿ. ಅವರು ಸ್ವಂತ ಪ್ರಯತ್ನದಿಂದ ಉದ್ದಿಮೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟವರು. ಅವರ ಉದ್ದಿಮೆಯ ನಷ್ಟಗಳ ಬಗ್ಗೆ ಒಂದಷ್ಟು ಊಹಾಪೋಹಗಳು ಎದ್ದಿವೆ. ಆದರೆ ಅದರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಸಿದ್ದಾರ್ಥ್ ಒಬ್ಬ ಸ್ನೇಹ ಜೀವಿ ಶ್ರಮಿಕ: ರಮಾನಾಥ ರೈ
ಸಿದ್ಧಾರ್ಥ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಾನು ಸ್ಟೂಡೆಂಟ್ ಲೀಡರ್ ಆಗಿದ್ದೆ. ಅವರೂ ನನನ್ನು ಬೇಬಿಯಣ್ಣ ಎಂದು ಕರೆಯುತ್ತಿದ್ದರು ಎಂದು ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಬಗ್ಗೆ ಮಾಜಿ ಸಚಿವ ರಮನಾಥ ರೈ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಾಜಿ ಸಚಿವ ರಮನಾಥ ರೈ
ಸಿದ್ದಾರ್ಥ್ ನನಗೆ ತುಂಬಾ ಆಪ್ತರಾಗಿದ್ದು, ಅವರು ಮಂಗಳೂರಿನ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ, ನಾನು ವಿದ್ಯಾರ್ಥಿ ಮುಖಂಡನಾಗಿದ್ದೆ. ಹಾಗಾಗಿ ನನ್ನ ಪರಿಚಯ ಅವರಿಗಿತ್ತು. ಆಮೇಲೆ ನನಗೂ ಅವರಿಗೂ ಸ್ನೇಹ ಬೆಳೆಯಿತು. ನನ್ನನ್ನು ಬೇಬಿಯಣ್ಣ ಎಂದೇ ಅವರು ಕರೆಯುತ್ತಿದ್ದರು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ನಾವು ಯಾವಾಗಲೂ ಭೇಟಿಯಾಗದಿದ್ದರೂ, ಸಿಕ್ಕಿದಾಗ ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಎಂದು ಸಿದ್ದಾರ್ಥ್ ವ್ಯಕ್ತಿತ್ವವನ್ನು ರೈ ಕೊಂಡಾಡಿದ್ರು.