ಮಂಗಳೂರು:ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲಿ ಸ್ಥಾಪನೆಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲಿ ಸ್ಥಾಪನೆ - Nalin Kumar katil latest news
ಈ ಅಕಾಡೆಮಿಯು ದೇಶದ ಸಮುದ್ರ ರಕ್ಷಣೆಗಾಗಿ ವೃತ್ತಿಪರ ಕೋಸ್ಟ್ ಗಾರ್ಡ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತರಬೇತಿಯಲ್ಲಿ ಮೈಲಿಗಲ್ಲು ಆಗಲಿದೆ..
Nalin kumar katil
ಈ ಕುರಿತು ಟ್ವೀಟ್ ಮಾಡಿರುವ ಅವರು, ನಗರದ ಹೊರವಲಯದಲ್ಲಿರುವ ಕೇಂಜಾರು ಸಮೀಪ 158 ಎಕರೆ ಪ್ರದೇಶದಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪಿಸಲು ಭೂಮಿಯನ್ನು ಕೆಐಎಡಿಬಿಯಿಂದ ಪಡೆದುಕೊಂಡಿದೆ.
ಈ ಅಕಾಡೆಮಿಯು ದೇಶದ ಸಮುದ್ರ ರಕ್ಷಣೆಗಾಗಿ ವೃತ್ತಿಪರ ಕೋಸ್ಟ್ ಗಾರ್ಡ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತರಬೇತಿಯಲ್ಲಿ ಮೈಲಿಗಲ್ಲು ಆಗಲಿದೆ. ಅಕಾಡೆಮಿಯನ್ನು ಮಂಗಳೂರಿಗೆ ನೀಡಿದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ, ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಅಕಾಡೆಮಿ ಸ್ಥಾಪನೆಗೆ ಭೂಮಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ಅನಂತ ಧನ್ಯವಾದಗಳು ಎಂದು ಕಟೀಲು ತಿಳಿಸಿದ್ದಾರೆ.