ಬಂಟ್ವಾಳ:ಲಾಕ್ಡೌನ್ನಿಂದ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಯಕ್ಷಗಾನ ಕಲಾವಿದರಿಗೆ ಸಹಾಯಹಸ್ತ ಚಾಚುವ ಸಲುವಾಗಿ ಇಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ತಮ್ಮ ಕಚೇರಿಯಲ್ಲಿ ದಿನ ಬಳಕೆಯ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು.
ಬಂಟ್ವಾಳ: ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ನೆರವು - Kit distribution in bantwala
ತಾಲೂಕಿನಲ್ಲಿ 500ಕ್ಕೂ ಅಧಿಕ ಯಕ್ಷಗಾನ ಕಲಾವಿದ್ದು, ಅದರಲ್ಲಿ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಅವರಿಗೆ ನೆರವು ಒದಗಿಸುವ ಸಲುವಾಗಿ ದಿನ ಬಳಕೆಯ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು.

ಯಕ್ಷಗಾನದ ರಂಗಪ್ರವೇಶ ಮಾಡಲು ಕೋವಿಡ್-19ನಿಂದ ಅಸಾಧ್ಯ ಪರಿಸ್ಥಿತಿ ಸೃಷ್ಟಿಯಾಗಿದೆ. ತಾಲೂಕಿನಲ್ಲಿ 500ಕ್ಕೂ ಅಧಿಕ ಯಕ್ಷಗಾನ ಕಲಾವಿದ್ದು, ಅದರಲ್ಲಿ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಅವರಿಗೆ ನೆರವು ಒದಗಿಸಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಸಹಕಾರ ಹಾಗೂ ಹಿರಿಯ ಕಲಾವಿದ ಆಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ವಳಚ್ಚಿಲ್ ಖಾದರ್, ರಂಗೋಲಿ ಸದಾನಂದ ಶೆಟ್ಟಿ, ರಾಮ್ ದಾಸ್ ಬಂಟ್ವಾಳ, ಡಾ. ಬಾಲಚಂದ್ರ ಶೆಟ್ಟಿ, ಖಾದರ್ ಇಕ್ರಾ, ದೇವದಾಸ್ ಶೆಟ್ಟಿ ಬಂಟ್ವಾಳ, ನಟರಾಜ ಕುಟ್ಟಿಕಲ, ಸುಧಾಕರ ಶೆಟ್ಟಿ ಮೊಗರೋಡಿ, ಸುರೇಶ್ ಮೀಯಾರು, ಚರಣ್ ಜುಮಾದಿಗುಡ್ಡೆ ಸಹಕಾರದಿಂದ ನೀಡುವ ದಿನ ಬಳಕೆಯ ವಸ್ತುಗಳ ಕಿಟ್ಗಳನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ತಮ್ಮ ಕಚೇರಿಯಲ್ಲಿ ಕಲಾವಿದರಿಗೆ ಸಾಂಕೇತಿಕವಾಗಿ ವಿತರಿಸಿದರು.