ಕರ್ನಾಟಕ

karnataka

ETV Bharat / state

ಮರಗಳ ಮಾರಣಹೋಮ... ಮ.ನ.ಪಾಗೆ ಫೇಸ್​ಬುಕ್​ನಲ್ಲಿ ಪರಿಸರವಾದಿಯ ಮಂಗಳಾರತಿ - Environmentalist Shashidhar Shetty

ಮರಗಳನ್ನು ಕಡಿದಿದ್ದಕ್ಕೆ ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ಫೇಸ್​ಬುಕ್ ಲೈವ್ ಮೂಲಕ ಜಿಲ್ಲೆಯ ಪರಿಸರವಾದಿ ಶಶಿಧರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

manglore
ಪರಿಸರವಾದಿ ಶಶಿಧರ್ ಶೆಟ್ಟಿ

By

Published : Mar 15, 2020, 2:58 PM IST

ಮಂಗಳೂರು:ಪರಿಸರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಯ ಪರಿಸರವಾದಿ ಶಶಿಧರ್ ಶೆಟ್ಟಿಯವರು ರಸ್ತೆ ಅಗಲೀಕರಣದ ನೆಪದಲ್ಲಿ ಮರಗಳ ಮಾರಣಹೋಮ ನಡೆಸಿದ ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ಫೇಸ್​ಬುಕ್ ಲೈವ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಫೇಸ್​ಬುಕ್ ಲೈವ್ ಎಲ್ಲೆಡೆ ಶೇರ್ ಆಗಿದ್ದು, ಶಶಿಧರ್ ಶೆಟ್ಟಿ ಕಾರ್ಯಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ನಗರದ ಮಂಗಳಾದೇವಿ ಸಮೀಪದ ಮಾರ್ನಮಿಕಟ್ಟೆಯಲ್ಲಿ ಮಹಾನಗರ ಪಾಲಿಕೆ ರಸ್ತೆ ಅಗಲೀಕರಣದ ನೆಪದಲ್ಲಿ ಬೃಹದಾಕಾರದ ಮರಗಳನ್ನು ಕಡಿದುರುಳಿಸಿದೆ. ಇದನ್ನು ಗಮನಿಸಿದ ಪರಿಸರವಾದಿ ಶಶಿಧರ್ ಶೆಟ್ಟಿಯವರು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಅದೇ ಸ್ಥಳದಲ್ಲಿ ನಿಂತು ಫೇಸ್​ಬುಕ್ ಲೈವ್ ನಡೆಸಿ ಅಧಿಕಾರಿಗಳು, ಇಂಜಿನಿಯರ್​ಗಳು ಹಾಗೂ ಖಾಸಗಿ ಇಂಜಿನಿಯರ್ ಧರ್ಮರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮರಗಳ ಮಾರಣಹೋಮ: ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪರಿಸರವಾದಿ

ಅಭಿವೃದ್ಧಿ ನೆಪದಲ್ಲಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಶಶಿಧರ್​ ಆರೋಪಿಸಿದ್ದಾರೆ. ಈ ಫೇಸ್​ಬುಕ್ ಲವ್​ಗೆ ಈಗಾಗಲೇ 5 ಸಾವಿರಕ್ಕೂ ಅಧಿಕ ಲೈಕ್ ಬಂದಿದ್ದು, 806 ಕಮೆಂಟ್ಸ್​, 1.90 ಲಕ್ಷ ಜನ ವಿಡಿಯೋವನ್ನು ನೋಡಿದ್ದಾರೆ.

ABOUT THE AUTHOR

...view details