ಮಂಗಳೂರು: ಕಳೆದ 11 ವರ್ಷಗಳಿಂದ ಸ್ಪೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಶ್ವಾನ ಇಂದು ಮೃತಪಟ್ಟಿದೆ.
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ, ಗೀತಾ ಎಂಬ ಶ್ವಾನ ಕರ್ತವ್ಯ ನಿರ್ವಹಿಸುತ್ತಿತ್ತು. 2011 ಮೇ 21 ಕ್ಕೆ ಜನಿಸಿದ ಈ ಶ್ವಾನಕ್ಕೆ 11 ವರ್ಷ 2ತಿಂಗಳು ವಯಸ್ಸಾಗಿದ್ದು, 2011 ಆಗಷ್ಟ್ 19ಕ್ಕೆ ಇಲಾಖೆಯ ಕರ್ತವ್ಯಕ್ಕೆ ಸೇರಿ 11 ವರ್ಷಗಳ ಕಾಲ ಇಲಾಖೆಗೆ ಸೇವೆ ಸಲ್ಲಿಸಿತ್ತು.
ಲ್ಯಾಬ್ರಡಾರ್ ರಿಟ್ರೇವರ್ ತಳಿಯ ಈ ಹೆಣ್ಣು ಶ್ವಾನಕ್ಕೆ ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ನೀಡಿ ಬಳಿಕ ಮಂಗಳೂರಿನ ಪೊಲೀಸ್ ಇಲಾಖೆಗೆ ಸೇರಿಸಲಾಗಿತ್ತು. ಹರೀಶ್ ಎಂಬ ಪೊಲೀಸ್ ಸಿಬ್ಬಂದಿ ಶ್ವಾನದ ಹ್ಯಾಂಡ್ಲರ್ ಆಗಿದ್ದರು. ಈ ಶ್ವಾನ ಮಂಗಳೂರು ನಗರಕ್ಕೆ ಅತೀ ಗಣ್ಯ ವ್ಯಕ್ತಿಗಳ ಆಗಮನದ ಸಂದರ್ಭದಲ್ಲಿ ಮತ್ತು ಇತರ ಬಂದೋಬಸ್ತ್ ಸಂದರ್ಭದಲ್ಲಿ ಸ್ಪೋಟಕ ಪತ್ತೆ ಕಾರ್ಯವನ್ನು ನಿರ್ವಹಿಸುತ್ತಿತ್ತು. ನಾಳೆ ಮಂಗಳೂರು ನಗರ ಪೊಲೀಸ್ ಇಲಾಖೆಯ ಸಿಎಆರ್ ಗ್ರೌಂಡ್ನಲ್ಲಿ ಎಲ್ಲಾ ಸರ್ಕಾರಿ ಗೌರವಗಳೊಂದಿಗೆ ಶ್ವಾನದ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ:ನೂರಾರು ಅಪರಾಧ ಪ್ರಕರಣ ಭೇದಿಸಿದ್ದ 10 ವರ್ಷದ ಶ್ವಾನ ಸಾವು.. 'ರೇವಾ'ಗೆ ಪೊಲೀಸ್ ಗೌರವ