ಕರ್ನಾಟಕ

karnataka

ETV Bharat / state

ಸುಬ್ರಹ್ಮಣ್ಯ: ಕಾಡಾನೆಗಳ ದಾಳಿಗೆ ವೃದ್ಧ ಬಲಿ - ದಕ್ಷಿಣ ಕನ್ನಡ ಸುದ್ದಿ

ಕಾಡಾನೆ ದಾಳಿಗೆ ಒಳಗಾದ ವ್ಯಕ್ತಿಯೋರ್ವರು ಗಂಭೀರವಾಗಿ ಗಾಯಗೊಂಡು ನಂತರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಕಾರಿನಿಂದ ವರದಿಯಾಗಿದೆ.

elephant
ಕಾಡಾನೆ

By

Published : Apr 8, 2021, 8:49 AM IST

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ಸುಬ್ರಹ್ಮಣ್ಯದಿಂದ ಐನಕಿದು ಕಲ್ಮಕಾರು, ಕೊಲ್ಲಮೊಗ್ರು, ಹರಿಹರ, ಬಾಳುಗೋಡು ಈ ಭಾಗಕ್ಕೆ ಸಂಪರ್ಕಿಸುವ ಮಲೆಯಾಳ ಐನಕಿದು ರಸ್ತೆಯ ಕೆದಿಲ ಬಳಿ ರಸ್ತೆಯಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ.

ಮಾ.7 ರಾತ್ರಿ 8 ಗಂಟೆ ಸುಮಾರಿಗೆ 8 ಆನೆಗಳಿರುವ ಹಿಂಡು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಭಯ ಮೂಡಿಸಿವೆ. ಈ ಮಾರ್ಗ ಕಾಡಿನೊಳಗೆ ಹಾದು ಹೋಗಿದ್ದು ದಾರಿ ಮಧ್ಯೆ ಯಾವುದೇ ಮನೆಗಳು ಇಲ್ಲ. ಕಾಡಾನೆಗಳ ಉಪಟಳದಿಂದ ಸ್ಥಳಿಯರಲ್ಲಿ ಆತಂಕ ಎದುರಾಗಿದೆ. ಸುಬ್ರಹ್ಮಣ್ಯದಿಂದ ಈ ರಸ್ತೆಯ ಮೂಲಕ ತೆರಳುವವರು ಎಚ್ಚರಿಕೆ ವಹಿಸುವಂತೆ ಸ್ಥಳೀಯರಿಗೆ ಸೂಚಿಸಲಾಗುತ್ತಿದೆ.

ಕಾಡಾನೆ ದಾಳಿಗೆ ಒಳಗಾದ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡು ನಂತರದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಕಾರಿನಿಂದ ವರದಿಯಾಗಿದೆ.

ಇದನ್ನೂ ಓದಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಗನ ಪ್ರತಿಮೆ ನಿರ್ಮಿಸಿ ಪೋಷಕರಿಂದ ಗೌರವ

ಪೈಪ್ ಸರಿ ಮಾಡಲು ಹೋದ ವೃದ್ಧರಾದ ಶಿವರಾಮ ಗೌಡ ಎಂಬವರು ಹಿಂತಿರುಗಿ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ್ದರು. ಈ ವೇಳೆ ಆನೆ ದಾಳಿ ಮಾಡಿ ಇವರು ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಇದ್ದರು. ಅವರನ್ನು ತಕ್ಷಣವೇ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details