ಕರ್ನಾಟಕ

karnataka

ETV Bharat / state

ಗುಂಡ್ಯ ಹೊಳೆ ಸಮೀಪ ಆನೆಮರಿಯ ಕಳೇಬರ ಪತ್ತೆ - Elephant cub found dead in gundya

ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಆನೆಮರಿಯ ಕಳೇಬರ ಪತ್ತೆ- ಸಕಲೇಶಪುರ ಅರಣ್ಯ ವಲಯದ ಮಾರನಹಳ್ಳಿ ಶಾಖೆಯ ಕೆಂಪುಹೊಳೆ ಬಳಿ ಪತ್ತೆ- ಮೇಲಿನಿಂದ ಹಾರಿ ನದಿಗೆ ಬಿದ್ದು ಸಾವನ್ನಪ್ಪಿರುವ ಶಂಕೆ

Elephant cub found dead
ಗುಂಡ್ಯ ಹೊಳೆ ಸಮೀಪ ಆನೆಮರಿ ಶವ ಪತ್ತೆ

By

Published : Jul 9, 2022, 10:15 AM IST

ಸುಬ್ರಮಣ್ಯ(ದಕ್ಷಿಣ ಕನ್ನಡ): ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗಡಿ ದೇವಸ್ಥಾನದ ಹಿಂಭಾಗದ 200 ಮೀಟರ್ ದೂರದ ಗುಂಡ್ಯ ಹೊಳೆ ಪಕ್ಕದಲ್ಲಿ ಸುಮಾರು 5 ತಿಂಗಳ ಗಂಡು ಮರಿ ಆನೆಯ ಕಳೇಬರ ಶುಕ್ರವಾರ 8ರ ರಾತ್ರಿ ಪತ್ತೆಯಾಗಿದೆ.

ಸಕಲೇಶಪುರ ಅರಣ್ಯ ವಲಯದ ಮಾರನಹಳ್ಳಿ ಶಾಖೆಯ ಕೆಂಪುಹೊಳೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಆನೆಮರಿಯ ಕಳೇಬರ ಪತ್ತೆಯಾಗಿದೆ. ತಾಯಿ ಆನೆಯೊಂದಿಗೆ ಮರಿಯಾನೆ ಆಹಾರ ಹುಡುಕುತ್ತ ಬರುವಾಗ ಮೇಲಿನಿಂದ ಜಾರಿ ನದಿಗೆ ಬಿದ್ದಿರಬಹುದು ಅಥವಾ ಹಳ್ಳ ದಾಟುವಾಗ ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಆನೆಮರಿ ಕಳೇಬರ

ಘಟನಾ ಸ್ಥಳಕ್ಕೆ ಮಾರನಹಳ್ಳಿ ಉಪವಲಯ ಅರಣ್ಯ ಅಧಿಕಾರಿ ಮಂಜುನಾಥ್, ಉಪ್ಪಿನಂಗಡಿ ಅರಣ್ಯ ವಲಯ ವ್ಯಾಪ್ತಿಯ ಶಿರಾಡಿ ಅರಣ್ಯಾಧಿಕಾರಿ ಧೀರಜ್ ಹಾಗೂ ಅರಣ್ಯ ರಕ್ಷಕ ಸುನೀಲ್ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.

ABOUT THE AUTHOR

...view details